ಎಚ್.ಡಿ.ಕೋಟೆ: ಕಬಿನಿ ಹಿನ್ನೀರಿನಲ್ಲಿ ದೋಣಿ ಸಫಾರಿ ವೇಳೆ ಭಾರೀ ಗಾತ್ರದ ಮೊಸಳೆಯೊಂದು ಕಾಣಿಸಿಕೊಂಡಿದ್ದು, ಪ್ರವಾಸಿಗರು ಫುಲ್ ಖುಷ್ ಆಗಿದ್ದಾರೆ.
ಕಬಿನಿ ಹಿನ್ನೀರಿನಲ್ಲಿ ಪ್ರವಾಸಿಗರು ದೋಣಿ ಸಫಾರಿ ನಡೆಸುವ ವೇಳೆ ಭಾರೀ ಗಾತ್ರದ ಮೊಸಳೆ ಕಾಣಿಸಿಕೊಂಡಿದೆ. ಮೊಸಳೆ ಕಾಣಿಸಿಕೊಂಡ ಕೂಡಲೇ ಪ್ರವಾಸಿಗರು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ದೃಶ್ಯ ಸೆರೆಹಿಡಿದಿದ್ದಾರೆ.
ಕಬಿನಿ ಹಿನ್ನೀರಿನಲ್ಲಿ ಮೀನುಗಳು, ಮೊಸಳೆಗಳು ಸೇರಿದಂತೆ ಜಲಚರಗಳು ಬಹಳಷ್ಟಿವೆ. ಈ ಹಿನ್ನೆಲೆಯಲ್ಲಿ ವೀಕೆಂಡ್ ಬಂದರೆ ಸಾಕು ದೋಣಿ ಸಫಾರಿ ಮಾಡುವ ವೇಳೆ ಪ್ರವಾಸಿಗರಿಗೆ ಜಲಚರಗಳು ಕಾಣಿಸಿಕೊಂಡು ಖುಷಿ ನೀಡುತ್ತಿವೆ.





