ಮೈಸೂರು : ಮೈಸೂರು ವಿಶ್ವ ವಿದ್ಯಾನಿಲಯ ವ್ಯಾಪ್ತಿಯ ಕುಕ್ಕರಹಳ್ಳಿ ಕೆರೆಯಲ್ಲಿ ಮೊಸಳೆಯೊಂದು ಪ್ರತ್ಯಕ್ಷವಾಗಿದೆ.
ಸಂಜೆ ವಾಯುವಿಹಾರಕ್ಕೆಂದು ಹೋದವರಿಗೆ ಬೃಹದಾಕಾರದ ಮೊಸಳೆಯೊಂದು ಕೆರೆಯ ದಂಡೆ ಮೇಲೆ ಕುಳಿತಿರುವುದನ್ನು ಕಂಡು ಭಯಬೀತರಾಗಿದ್ದಾರೆ.
ಭಾನುವಾರ(ಮಾ.೩) ಸಂಜೆ ಕುಕ್ಕರ ಹಳ್ಳಿಗೆ ವಾಯು ವಿಹಾರಕ್ಕೆ ತೆರಳಿದವರ ಕಣ್ಣಿಗೆ ಕೆರೆಯ ಉತ್ತರ ದಿಕ್ಕಿನಲ್ಲಿರುವ ದಡದಲ್ಲಿ ಸುಮಾರು ಆರು ಅಡಿ ಉದ್ದವಿರುವ ಮೊಸಳೆಯು ಆಹಾರಕ್ಕಾಗಿ ಹೊಂಚು ಹಾಕುತ್ತಾ ಕಾಯುತ್ತಿರುವ ದೃಶ್ಯ ಕಂಡಿದೆ.
ವಿಹಾರಿಯೊಬ್ಬರು ಮೊಸಳೆ ಕುಳಿತಿರುವ ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ಸದ್ಯ ಈ ವಿಡಿಯೊ ವೈರಲ್ ಆಗಿದ್ದು, ವೈರಲ್ ಆದ ಬೆನ್ನಲ್ಲೇ ವಾಯುವಿಹಾರಿಗಳು ಭಯ ಭೀತರಾಗಿದ್ದಾರೆ.
ಕೆರೆಯಲ್ಲಿ ಮೀನುಗಳ ಸಾವು ಹಚ್ಚಾಗಿದ್ದು, ಅವುಗಳ ವಾಸನೆ ಜಾಡು ಹಿಡಿದು ಆಹಾರ ಹುಡುಕುತ್ತಾ ಬಂದು ಕೆರೆಯಲ್ಲಿ ಬೀಡು ಬಿಟ್ಟಿರಬಹುದು. ಅಂದಾಜು ಐದಾರು ವರ್ಷ ವಯಸ್ಸಿನ ಈ ಮೊಸಳೆ ಸುಮಾರು 50 ಕೆಜಿ ತೂಕವಿರಬಹುದು ಎಂದು ಊಹಿಸಲಾಗಿದೆ.





