Mysore
15
broken clouds

Social Media

ಬುಧವಾರ, 24 ಡಿಸೆಂಬರ್ 2025
Light
Dark

ತಲಾ ಆದಾಯ ಹೆಚ್ಚಳಕ್ಕೆ ಉದ್ಯೋಗ ಸೃಷ್ಟಿಸಿ ; ಆರ್ಥಿಕ ತಜ್ಞ ಗೋವಿಂದರಾವ್‌ ಅಭಿಮತ

ಮೈಸೂರು: ಕಾರ್ಖಾನೆಗಳು ಸ್ಥಾಪನೆ  ಆಗಿ ಜನರಿಗೆ ಉದ್ಯೋಗಾವಕಾಶಗಳು ದೊರೆಯುವಂತ ಯೋಜನೆಗಳನ್ನು ರೂಪಿಸಿದಾಗ ಮಾತ್ರ ಪ್ರಾದೇಶಿಕ ಅಸಮತೋಲನ ಹೋಗಲಾಡಿಸಲು ಸಾಧ್ಯ ಎಂದು ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯ ಅಧ್ಯಕ್ಷರೂ ಆದ ಆರ್ಥಿಕ ತಜ್ಞ ಪ್ರೊ ಎಂ ಗೋವಿಂದರಾವ್ ಅಭಿಪ್ರಾಯಪಟ್ಟರು.

ಇಂದು (ಮಾ.24) ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಮೈಸೂರು ವಿಭಾಗ ಮಟ್ಟದ ಸಂವಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರಾದೇಶಿಕ ಅಸಮತೋಲನ ಸಮಿತಿ 2024 ರ ಸೆಪ್ಟೆಂಬರ್ ನಿಂದ ಕೆಲಸ ಮಾಡಲು ಪ್ರಾರಂಭಿಸಿದೆ. ನಂಜುಂಡಪ್ಪ ವರದಿಯಲ್ಲಿ 35 ಸೂಚ್ಯಂಕ ಗಳನ್ನು ಅಧ್ಯಯನ ಮಾಡಿ ವರದಿ ನೀಡಿತ್ತು. ವರದಿಯಂತೆ 31 ಸಾವಿರ ಕೋಟಿ ಹಣ ಖರ್ಚು ಮಾಡಲಾಗಿದೆ ಆದರೂ ಹಲವು ಕ್ಷೇತ್ರಗಳಲ್ಲಿ ಅಭಿವೃದ್ದಿ ಆಗಿಲ್ಲ. ಈ ಬಗ್ಗೆ ಸಮಿತಿಯಿಂದ ಹಲವು ಆಯಾಮಗಳಲ್ಲಿ ಅಧ್ಯಯನ ನಡೆಸಲಾಗುವುದು ಎಂದರು.

ಪ್ರಾದೇಶಿಕ ಅಸಮತೋಲನ ಹೋಗಲಾಡಿಸಲು ಹಿಂದುಳಿದ ತಾಲ್ಲೂಕುಗಳ ಜನರ ತಲಾ ಆದಾಯ ಹೆಚ್ಚಾಗಬೇಕು. ಈ ನಿಟ್ಟಿನಲ್ಲಿ ಸೌಲಭ್ಯಗಳನ್ನು ಕಲ್ಪಿಸಿ ಯೋಜನೆಗಳನ್ನು ರೂಪಿಸಬೇಕು ಎಂದು ಅಭಿಪ್ರಾಯಪಟ್ಟರು.

ಅನುದಾನ ಖರ್ಚು ಮಾಡಿದರೆ ಅಭಿವೃದ್ದಿ ಆಗುತ್ತದೆ ಎಂಬುದು ಸಾಧ್ಯವಿಲ್ಲ. ಅಲ್ಲಿನ ಜನರ ತಲಾ ಆದಾಯ ಹೆಚ್ಚಾಗಬೇಕು. ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕದ ತಲಾ ಆದಾಯದಲ್ಲಿ ವ್ಯತ್ಯಾಸ ಇವೆ. ಉತ್ತರ ಕರ್ನಾಟಕ ಕಡಿಮೆ ತಲಾ ಆದಾಯ ಹೊಂದಿವೆ.

ಹೆಚ್ ಡಿ ಕೋಟೆ ವಿಧಾನ ಸಭಾ ಕ್ಷೇತ್ರದ ಶಾಸಕ ಅನಿಲ್ ಕುಮಾರ್ ಮಾತನಾಡಿ, ಹೆಚ್ ಡಿ ತಾಲ್ಲೂಕು ಹಾಗೂ ಸರಗೂರು ತಾಲ್ಲೂಕುಗಳು ಹಿಂದುಳಿದಿವೆ. ನಮ್ಮ ತಾಲ್ಲೂಕು ವಿಸ್ತೀರ್ಣದಲ್ಲಿ ದೊಡ್ಡದು ಇದೆ. ವಿಸ್ತೀರ್ಣದ ಆದರದ ಮೇಲೆ ಅನುದಾನವನ್ನು ನೀಡಬೇಕು. ನಮ್ಮ ತಾಲ್ಲೂಕಿನಲ್ಲಿ 300 ಹಳ್ಳಿ ಗಳು ಇವೆ ಆದರೆ ನಮ್ಮ ತಾಲ್ಲೂಕು ಕೆ ಎಸ್ ಆರ್ ಟಿ ಸಿ ಯಲ್ಲಿ ಕೇವಲ 70 ಬಸ್ ಗಳು ಇವೆ. ಈ ಬಸ್ ಗಳು ಹಳೆಯಾದಾಗಿವೆ. ನಮ್ಮ ತಾಲ್ಲೂಕಿನ ಶಾಲೆಗಳಲ್ಲಿ ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಹಳ್ಳಿಗಳಿಗೆ ಸಂಪರ್ಕ ರಸ್ತೆಗಳು ಸಮರ್ಪಕವಾಗಿ ಇಲ್ಲ. ತಾಲ್ಲೂಕಿನಲ್ಲಿ ಹೆಚ್ಚಿನ ಹಾಡಿ ಜನರು ವಾಸ ಮಾಡುತ್ತಿದ್ದಾರೆ. ಆದ್ದರಿಂದ ನಮ್ಮ ತಾಲ್ಲೂಕಿನ ಅಭಿವದ್ಧಿಗೆ ಸಾಮಾಜಿಕ ನ್ಯಾಯವನ್ನು ಒದಗಿಸಬೇಕು ಎಂದು ಸಮಿತಿಗೆ ಮಾಹಿತಿ ನೀಡಿದರು.

ಪ್ರೊ ಸೂರ್ಯ ನಾರಾಯಣ್ ಮಾತನಾಡಿ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳು ಈ ಭಾಗದಲ್ಲಿ ಅಭಿವೃದ್ದಿ ಹೊಂದಿರುವ ಜಿಲ್ಲೆಗಳು ಆದರೂ ಉಡುಪಿ ಜಿಲ್ಲೆಯ ಬ್ರಹ್ಮಾವರದ ಹಲವು ಶಾಲೆಗಳಲ್ಲಿ ವಿಜ್ಞಾನ ಪ್ರಯೋಗಾಲಯಗಳು ಇಲ್ಲ. ಜಿಲ್ಲೆಗಳ ಅಭಿವದ್ಧಿಗೆ ಉತ್ತಮ ಶಿಕ್ಷಣ ಹಾಗೂ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದರು.

ಪ್ರಾದೇಶಿಕ ಅಸಮತೋಲನ ಸಮಿತಿಯ ನಿರ್ದೇಶಕ ಚಂದ್ರಶೇಖರಯ್ಯ ಮಾತನಾಡಿ,  1956 ರಲ್ಲಿ ಕರ್ನಾಟಕ ಏಕೀಕರಣ ಆಯಿತು. ಮೈಸೂರು ಭಾಗ ಅಭಿವೃದ್ದಿ ಆಗಿತ್ತು. ಆದರೆ ಹೈದರಾಬಾದ್ ಪ್ರಾಂತ್ಯ ಅಭಿವೃದ್ದಿ ಆಗಿರಲಿಲ್ಲ. 2000 ರಲ್ಲಿ ಪ್ರೊ ನಂಜುಂಡಯ್ಯ ಅವರ ಅಧ್ಯಕ್ಷತೆಯಲ್ಲಿ ಪ್ರಾದೇಶಿಕ ಅಸಮತೋಲನ ಸಮಿತಿ ರಚನೆಯನ್ನು ಕರ್ನಾಟಕ ಸರ್ಕಾರ ಮಾಡಿತು. ಈ ಸಮಿತಿಯು ವರದಿಯನ್ನು ಸರಕಾರಕ್ಕೆ ನೀಡಿತು. ಅಂದಿನ 175 ತಾಲ್ಲೂಕುಗಳಲ್ಲಿ 113 ತಾಲ್ಲೂಕುಗಳು ಹಿಂದುಳಿದ ತಾಲ್ಲೂಕುಗಳು ಎಂದು ವರದಿ ನೀಡಿತು. ವರದಿ ಪ್ರಕಾರ ಸರ್ಕಾರ 31 ಸಾವಿರ ಕೋಟಿ ರೂ ಗಳನ್ನು ಹಿಂದುಳಿದ ತಾಲ್ಲೂಕುಗಳು ಅಭಿವದ್ಧಿಗೆ ಬಳಸಬೇಕು. ಶೇಕಡಾ 60% ಉತ್ತರ ಕರ್ನಾಟಕಕ್ಕೆ ಹಾಗೂ 40% ಅನುದಾನವನ್ನು ದಕ್ಷಿಣ ಕರ್ನಾಟಕಕ್ಕೆ ಬಳಸಬೇಕು. ಎಂದು ವರದಿ ನೀಡಿತು.

ಸಭೆಯಲ್ಲಿ ಉದ್ಯಮಿಗಳು ಕೈಗಾರಿಕೋದ್ಯಮಿಗಳು, ಸಂಘ ಸಂಸ್ಥೆಗಳು ಪ್ರತಿನಿಧಿಗಳು ಹಾಗೂ ಮೈಸೂರು ವಿಭಾಗದ ಜಿಲ್ಲೆಗಳ ಅಧಿಕಾರಿಗಳು ತಮ್ಮ ಅಭಿಪ್ರಾಯ ಹಾಗೂ ಸಲಹೆಗಳನ್ನು ಸಭೆಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರಾದೇಶಿಕ ಸಮತೋಲನ ಸಮಿತಿಯ ಸದಸ್ಯ ಡಾ. ಎಸ್.ಟಿ. ಬಾಗಲಕೋಟಿ, ಯೋಜನೆ ಇಲಾಖೆಯ ಯೋಜನೆ ಇಲಾಖೆಯ ಕಾರ್ಯದರ್ಶಿಗಳು ಹಾಗೂ ಸಮಿತಿಯ ಸದಸ್ಯ ಕಾರ್ಯದರ್ಶಿ ಡಾ. ವಿಶಾಲ್ ಆರ್ , ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಯುಕೇಶ್ ಕುಮಾರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Tags:
error: Content is protected !!