ಈ ಹಿಂದಿನ ಮೇಯರ್ ಸುನಂದಾ ಪಾಲನೇತ್ರ ಅವರು 25 ಕೋಟಿ ರೂ., ಶಾಸಕರಾದ ಎಸ್.ಎ. ರಾಮದಾಸ್ ಅವರು 150 ಕೋಟಿ ರೂ. ಹಾಗೂ ಎಲ್.ನಾಗೇಂದ್ರ ಅವರು 200 ಕೋಟಿ ರೂ. ಅನುದಾನವನ್ನು ರಸ್ತೆ, ಪಾರ್ಕ್, ಯುಜಿಡಿ ಅಭಿವೃದ್ಧಿಗೆ ತಂದಿದ್ದಾರೆ. ಇದರ ಜೊತೆಗೆ ಪಾಲಿಕೆಯ 10 ಕೋಟಿ ರೂ. ಹಾಗೂ 15ನೇ ಹಣಕಾಸಿನ ಯೋಜನೆಯಡಿ ಅನುದಾನವನ್ನು ರಸ್ತೆ ಡಾಂಬರೀಕರಣಕ್ಕೆ ಬಳಸಲಾಗುತ್ತಿದೆ. ಒಟ್ಟಾರೆ ಸದ್ಯ 250 ಕೋಟಿ ರೂ. ವೆಚ್ಚದಲ್ಲಿ ಇನ್ನು ಮೂರು ದಿನದಲ್ಲಿ ಮರು ಡಾಂಬರೀಕರಣಕ್ಕೆ ಚಾಲನೆ ನೀಡಲಾಗುತ್ತದೆ. ಟೆಂಡರ್ ಹಂತದಲ್ಲಿರುವ ರಸ್ತೆ ಕಾಮಗಾರಿಯನ್ನೂ ಬೇಗ ಮುಗಿಸಲು ಪಾಲಿಕೆ ಚಿಂತನೆ ನಡೆಸಿದೆ. ಎಂದು ನಗರಪಾಲಿಕೆ ಮೇಯರ್ ಶಿವಕುಮಾರ್ ತಿಳಿಸಿದ್ದಾರೆ.
ರಸ್ತೆ ಕಾಮಗಾರಿಯನ್ನು ಬೇಗ ಮುಗಿಸಲು ಪಾಲಿಕೆ ಚಿಂತನೆ : ನಗರಪಾಲಿಕೆ ಮೇಯರ್ ಶಿವಕುಮಾರ್





