Mysore
27
scattered clouds

Social Media

ಶನಿವಾರ, 17 ಜನವರಿ 2026
Light
Dark

ಸಿ.ಟಿ ರವಿಗೆ ಬಿಕೆ ಹರಿಪ್ರಸಾದ್ ಸವಾಲು

ಮೈಸೂರು: 15 ದಿನಗಳ ಕಾಲ ಸಮಯ ಕೊಡುತ್ತೇನೆ, ತಾಕತ್ತು, ಧಮ್ ಇದ್ರೆ ನನ್ನ ವಿರುದ್ಧ ಐಟಿ, ಇಡಿ ತನಿಖೆ ಮಾಡಿಸಲಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿಗೆ ಪರಿಷತ್ ಪ್ರತಿಪಕ್ಷದ ನಾಯಕ ಬಿ.ಕೆ ಹರಿಪ್ರಸಾದ್ ಸವಾಲು ಹಾಕಿದ್ದಾರೆ.

ಕೋತ್ವಾಲ್ ನ ಮೂಲವೇ ಚಿಕ್ಕಮಗಳೂರು, ಸಿ.ಟಿ ರವಿ ಕೋತ್ವಾಲ್ ನ ಸಂತತಿ.,ನಾನು ಗ್ರಾಮ ಪಂಚಾಯಿತಿ ಚುನಾವಣೆ ನಿಂತು ಗೆದ್ದಿಲ್ಲ ನಿಜಾ. ವಿಶ್ವಗುರು ಮೋದಿ ಯಾವ ಚುನಾವಣೆ ಗೆದ್ದು ಗುಜರಾತ್ ನ ಸಿಎಂ ಆಗಿದ್ದು? ಸಿಟಿ ರವಿ ಹಾಗೆ ನಾನು ಜಾತಿ, ಹಣ ಬಲದಿಂದ ಚುನಾವಣೆ ಎದುರಿಸುವ ಕ್ರಿಮಿನಲ್ ಅಲ್ಲ ಎಂದು ಸಿಟಿ ರವಿ ವಿರುದ್ಧ ಬಿಕೆ ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.

ಗುಂಡ್ಲುಪೇಟೆಯಲ್ಲಿ ಮಾತನಾಡಿದ ಅವರು, ಸಿ.ಟಿ ರವಿ ಹಾಗೂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ನನ್ನ ಜೀವನದಲ್ಲಿ ಎಲ್ಲಾದ್ರೂ ಎಫ್ ಐ ಆರ್ ಆಗಿದ್ರೆ , ನಾನು ನನ್ನ ರಾಜಕೀಯ ಜೀವನವನ್ನೇ ಬಿಡ್ತೇನೆ. ಸಿಟಿ ರವಿ ಕೋಟ್ಯಾಧೀಶ, ಸಿ ಟಿ ರವಿ ಎಂ ಎಲ್ ಎ ಆದಾಗ ಎಷ್ಟು ದುಡ್ಡು ಇತ್ತು, ಇವಾಗ ಎಷ್ಟಿದೆ ಅಂತ ಲೆಕ್ಕ ಕೊಡ್ಲಿ ಎಂದು ಸವಾಲು ಹಾಕಿದರು.ಸಿ ಟಿ ರವಿ ಆಲ್ದಳ್ಳಿಯಿಂದ ಬಂದವರು. ಅವರು, ರಸ್ತೆ ಮೇಲೆ ಲಿಫ್ಟ್ ಗಾಗಿ ಕಾಯ್ತಿದ್ದ‌ ಕಾಲದಲ್ಲೇ ನನ್ನ ಬಳಿ ಸ್ಕೂಟರ್ ಇತ್ತು. ಅವರ ಭಾಷೆ ಅವರ ವ್ಯಕ್ತಿತ್ವವನ್ನು ತೋರಿಸುತ್ತೆ. ಕುಡಿದ ನಶೆಯಲ್ಲಿ ಕಾರ್ ಓಡಿಸಿ ಅಮಾಯಕ ಜನರನ್ನು ಕೊಂದವನಲ್ಲ ನಾನು. ಚಿಕ್ಕಮಗಳೂರಿನಲ್ಲಿ ಸಿಟಿ ರವಿ ಏನು ಅಂತಾ ತುಂಬಾ ಚೆನ್ನಾಗಿ ಗೊತ್ತಿದೆ ಎಂದು ವಾಗ್ದಾಳಿ ನಡೆಸಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!