Mysore
15
clear sky

Social Media

ಶನಿವಾರ, 27 ಡಿಸೆಂಬರ್ 2025
Light
Dark

ಕಾಂಗ್ರೆಸ್‌ ದಲಿತ ವಿರೋಧಿ: ಎನ್.ಮಹೇಶ್‌

ಮೈಸೂರು: ದಲಿತರಿಗೆ ಮೀಸಲಿಟ್ಟ 25ಸಾವಿರ ಕೋಟಿ ಹಣವನ್ನು ಕಾಂಗ್ರೆಸ್‌ ಗ್ಯಾರಂಟಿ ಯೋಜನೆಗಳಿಗೆ ಬಳಸಿದೆ. ಇದರಿಂದ ದಲಿತ ವಿದ್ಯಾರ್ಥಿ ಸ್ಕಾಲರ್‌ ಶಿಪ್‌, ಗಂಗಾ ಕಲ್ಯಾಣ ಯೋಜನೆ ಹಾಗೂ ಹಾಸ್ಟಲ್‌ಗಳಿಗೆ ಹಣವಿಲ್ಲದಾಗಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್‌ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಮೈಸೂರು ಚಲೋ ಪಾದಯಾತ್ರೆಯ ಸಮರೋಪ ಸಮಾರಂಭದಲ್ಲಿ ಭಾಗಿಯಾಗಿ ಅವರು ಮಾತನಾಡಿದರು.

ಕಾಂಗ್ರೆಸ್ ಪ್ರಬುದ್ಧ ಯೋಜನೆಯನ್ನು ಸಹ ರದ್ದು ಮಾಡಿದೆ.‌ ಹೀಗಾಗಿ ಕಾಂಗ್ರೆಸ್‌ ದಲಿತ ವಿರೋಧಿ ಸರ್ಕಾರವಾಗಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಬಹುಕೋಟಿ ರೂಪಾಯಿ ದುರ್ಬಳಕೆಯಾಗಿರುವುದನ್ನು ಸಿದ್ದರಾಮಯ್ಯ ಒಪ್ಪಿಕೊಂಡಿದ್ದಾರೆ. ಹಣಕಾಸು ಸಚಿವರ ಗಮನಕ್ಕೆ ಬಾರದೆಯೇ ಇದೆಲ್ಲಾ ಸಾಧ್ಯವೇ ಎಂದು ಪ್ರಶ್ನಿಸಿದರು.

ಕೆಸರೆ ಗ್ರಾಮದಲ್ಲಿ ಸಿದ್ದರಾಮಯ್ಯ ಕುಟುಂಬ ಜಮೀನು ಖರೀದಿಸಿದ್ದು ಮೂಲತಃ ದಲಿತರದ್ದು. ನಿಂಗನ ವಾರಸುದಾರರಿಗೆ ಆ ಬದಲಿ ನಿವೇಶನಗಳು ಸೇರಬೇಕು ಎಂದು ಹೇಳಿದರು.

Tags:
error: Content is protected !!