ಮೈಸೂರು : ಕಾಂಗ್ರೆಸ್ ದುರಾಡಳಿತ ವಿಚಾರವನ್ನು ಜನರ ಮುಂದೆ ಇಡಲು ಇಂದಿನಿಂದ ಜನಾಕ್ರೋಶ ಯಾತ್ರೆ ಆರಂಭಿಸಲಿದ್ದೇವೆ ಎಂದು ಸಂಸದ ಕೃಷ್ಣದತ್ತ ಚಾಮರಾಜ ಯದುವೀರ್ ಒಡೆಯರ್ ಹೇಳಿದ್ದಾರೆ.
ಇಂದಿನಿ ಜನಾಕ್ರೋಶ ಯಾತ್ರೆಗೂ ಮುನ್ನ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ದರ ಏರಿಕೆ ಮಾಡಿ ಜನರ ಹಿತ ಮರೆತಿದೆ. ಹೀಗಾಗಿ ಇಂದು ಬಿಜೆಪಿಯ ಕೇಂದ್ರ ಹಾಗೂ ರಾಜ್ಯ ನಾಯಕರು ಮೈಸೂರಿನಲ್ಲಿ ಜನಾಕ್ರೋಶ ಯಾತ್ರೆಗೆ ಚಾಲನೆ ನೀಡಲಿದ್ದಾರೆ ಎಂದರು.
ಇನ್ನೂ ಕೊಡಗಿನ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಅತ್ಮಹತ್ಯೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ವಿನಯ್ ಸೋಮಯ್ಯಗೆ ಮಾನಸಿಕ ಕಿರುಕುಳ ಆಗಿದೆ. ನಾಲ್ಕೈದು ತಿಂಗಳಿನಿಂದ ಸಾಕಷ್ಟು ಒತ್ತಡಕ್ಕೆ ಒಳಗಾಗಿದ್ರು. ಆತನ ಸಾವಿಗೆ ಕಾಂಗ್ರೆಸ್ ಮುಖಂಡರು ಹಾಗೂ ಒತ್ತಡವೇ ಕಾರಣ ಅಂತ ಡೇತ್ ನೋಟ್ ಇದೇ. ಹೀಗಾಗಿ ನಮಗೆ ನ್ಯಾಯ ಬೇಕಿದೆ. ನಮ್ಮ ಕಾರ್ಯಕರ್ತನ ಪರವಾಗಿ ನಿಲ್ಲುವುದು ನಮ್ಮ ಕರ್ತವ್ಯವಾಗಿದೆ ಎಂದು ಹೇಳಿದರು.





