Mysore
29
few clouds

Social Media

ಮಂಗಳವಾರ, 11 ಮಾರ್ಚ್ 2025
Light
Dark

ಗ್ಯಾರಂಟಿಯಿಂದ ಭಯೋತ್ಪಾದನೆ ಸೃಷ್ಠಿ: ಜಿ ಟಿ ದೇವೇಗೌಡ

ಮೈಸೂರು: ರಾಜ್ಯ ಕಾಂಗ್ರೆಸ್‌ ಸರ್ಕಾರದ ಐದು ಗ್ಯಾರಂಟಿಗಳು ಭಯೋತ್ಪಾದಕರನ್ನು ಉತ್ಪಾದನೆ ಮಾಡುತ್ತವೆ ಎಂದು ಶಾಸಕ ಜಿ.ಟಿ ದೇವೆಗೌಡ ಹೇಳಿದ್ದಾರೆ.

ಮೋದಿ ಬಿರುಗಾಳಿಗೆ ಗ್ಯಾರಂಟಿ ಗಾಳಿಯಲ್ಲಿ ತೂರಿವೆ. 10ತಿಂಗಳಲ್ಲಿ ಗ್ಯಾರಂಟಿ ಬಿಟ್ಟರೆ ಅಭಿವೃದ್ಧಿಯಾಗಿಲ್ಲ. ಕಾಂಗ್ರೆಸ್‌ ಚುನಾವಣೆಯಲ್ಲಿ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಜಿ.ಟಿ ದೇವೇಗೌಡ ಆರೋಪಿಸಿದ್ದಾರೆ.

ಕರ್ನಾಟಕದಲ್ಲಿ 28 ಸ್ಥಾನಗಳನ್ನು ಎನ್.ಡಿ.ಎ ಗೆಲ್ಲುವ ವಿಶ್ವಾಸವಿದೆ. ಕಾಂಗ್ರೆಸ್‌ 60 ಕ್ಕಿಂತ ಅಧಿಕ ಸ್ಥಾನ ಗೆಲ್ಲಲ್ಲ, ವಿರೋಧ ಪಕ್ಷದ ಸ್ಥಾನವೂ ಸಿಗುವುದಿಲ್ಲ. ಮೋದಿಯನ್ನು ಬೈಯುವುದೇ ಕಾಂಗ್ರೆಸ್‌ ಗ್ಯಾರಂಟಿಯಾಗಲಿದೆ ಎಂದು ಟೀಕಿಸಿದರು.

Tags: