Mysore
15
overcast clouds

Social Media

ಗುರುವಾರ, 18 ಡಿಸೆಂಬರ್ 2025
Light
Dark

ರೈಲ್ವೆ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಿ : ರೈಲ್ವೆ ಸಚಿವ ವಿ.ಸೋಮಣ್ಣ

v somanna

ಮೈಸೂರು : ರೈಲ್ವೆ ಇಲಾಖೆಯಲ್ಲಿ ನಡೆಯುತ್ತಿರುವ ಎಲ್ಲಾ ಕಾಮಗಾರಿಗಳು ತ್ವರಿತವಾಗಿ ನಡೆಯಬೇಕು. ಅದಕ್ಕೆ ಯಾವುದೇ ಸಹಕಾರ ಬೇಕಿದರೂ ಕೇಳಿ ನೀಡುತ್ತೇನೆ ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು.

ಮೈಸೂರಿನ ರೈಲ್ವೆ ಡಿಆರ್‌ಎಂ ಕಚೇರಿಯಲ್ಲಿ ಮೈಸೂರು ವಿಭಾಗೀಯ ರೈಲ್ವೆ ಪ್ರಬಂಧಕರು ಹಾಗೂ ಇತರ ಅಧಿಕಾರಿಗಳೊಂದಿಗೆ ವಿಮರ್ಶಾ ಸಭೆ ನಡೆಸಿ ಮೈಸೂರಿನ ವಿಭಾಗೀಯ ಮಟ್ಟದಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಡಿಆರ್‌ಎಂ ಮುದಿತ್ ಮಿಥಲ್ ಕಾಮಗಾರಿಗಳ ಬಗ್ಗೆ ವಿವರಿಸಿ, ಮೈಸೂರಿನ ರೈಲ್ವೆ ನಿಲ್ದಾಣದಲ್ಲಿ ೪೩೯.೩ ಕೋಟಿ ರೂ ವೆಚ್ಚದಲ್ಲಿ ಹೆಚ್ಚುವರಿಯಾಗಿ ಐದು ಪ್ಲಾಟ್ ಫಾರಂಗಳನ್ನ ನಿರ್ಮಾಣ ಮಾಡಲಾಗುತ್ತಿದೆ. ಇದಕ್ಕಾಗಿ ಸಬ್ ವೇ, ಸ್ಕೈವಾಕ್ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಮಾಡಿಕೊಡಲಾಗುತ್ತದೆ. ಸಿಬ್ಬಂದಿಗಳ ಕ್ವಾರ್ಟಸ್ ನಿರ್ಮಾಣ ಮಾಡಲಾಗುತ್ತಿದೆ ಅದರ ಕಾಮಗಾರಿ ಪ್ರಗತಿಯಲ್ಲಿದೆ. ಮತ್ತೊಂದೆಡೆ ನಾಗನಹಳ್ಳಿ ಯಾರ್ಡ್‌ಗಾಗಿ ೮ ಎಕರೆ ೨೯ಕುಂಟೆ ಜಾಗವನ್ನು ಪತ್ತೆ ಮಾಡಲಾಗಿದೆ. ಆದರೆ ಅದಕ್ಕೆ ಭೂ ಸ್ವಾಧೀನದ ತೊಡಕು ಉಂಟಾಗಿದ್ದು, ಈ ಸಂಬಂಧ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ವಿವರಿಸಿದರು.

ಬಳಿಕ ಮಾತನಾಡಿದ ಸಚಿವರು, ರೈಲ್ವೆ ಕ್ವಾರ್ಟಸ್‌ಗೆ ಪ್ರಧಾನ ಮಂತ್ರಿಗಳು ಚಾಲನೆ ನೀಡಿದ್ದು ಇನ್ನೂ ಏಕೆ ಕಾಮಗಾರಿ ತಡವಾಗಿದೆ? ಶೀಘ್ರವಾಗಿ ಕಾಮಗಾರಿ ಮುಗಿಸಿ, ಭೂ ಸ್ವಾಧೀನದ ವಿಚಾರವಾಗಿ ನಾನು ಕರ್ನಾಟಕ ಸರ್ಕಾರದೊಂದಿಗೆ ಮಾತನಾಡುತ್ತೇನೆ ಎಂದು ತಿಳಿಸಿದರು.

ಕರ್ನಾಟಕದಲ್ಲಿ ರೈಲ್ವೆ ಇಲಾಖೆ ಸಂಬಂಧಿಸಿದಂತೆ ಎಲ್ಲಾ ಕೆಲಸಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೈ ಜೋಡಿಸಿ ಸಹಕಾರ ನೀಡುತ್ತಿದ್ದಾರೆ. ಪ್ರದಾನಮಂತ್ರಿ ಮೋದಿ ಅವರಿಗೆ ರೈಲ್ವೆ ಇಲಾಖೆ ಬಗ್ಗೆ ಸಾಕಷ್ಟು ದೂರ ದೃಷ್ಟಿ ಇದ್ದು, ಇಲಾಖೆ ವತಿಯಿಂದ ೩೯ ಸಾವಿರ ಕೋಟಿ ರೂ. ವೆಚ್ಚದ ೧೩ ಯೋಜನೆ ನಡೆಯುತ್ತಿದೆ. ಪ್ರಮುಖವಾಗಿ ರಾಯದುರ್ಗ ಮತ್ತು ತುಮಕೂರು, ತುಮಕೂರು ಮತ್ತು ದಾವಣಗೆರೆ, ಕುಡುಚಿ ಮತ್ತು ಗದಗ ಸೇರಿದಂತೆ ಅನೇಕ ಯೋಜನೆಗಳು ನಡೆಯುತ್ತಿವೆ. ೨೫ ವರ್ಷಗಳಿಂದ ಹಿಂದೆ ಉಳಿದ್ದಿರುವ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು.

ತುಮಕೂರಿನಲ್ಲಿ ವಿಕಸಿತ ಭಾರತದಡಿ ಗ್ರೀನ್ ಕಾರಿಡಾರ್ ಮಾಡುತ್ತಿದ್ದೇವೆ. ಎಲ್ಲಿ ಕಾರ್ಖಾನೆಗಳಿವೆ ಅಲ್ಲಿ ರೈಲ್ವೆ ಹಳಿಗಳನ್ನು ಅಳವಡಿಸಿ ಗೂಡ್ಸ್ ಟ್ರಾಸ್ ಪೋರ್ಟ್‌ಟೆಷನ್‌ಗೆ ಒತ್ತು ನೀಡಲಾಗುತ್ತಿದೆ. ಇದ್ದರಿಂದ ಟ್ರಾಸ್ ಪೋರ್ಟ್‌ಟೆಷನ್ ವೆಚ್ಚವೂ ಕಡಿಮೆ ಆಗಲಿದೆ. ೪೦ ವರ್ಷ ಇಲ್ಲಿ ಏನು ಸೇವೆ ಮಾಡಿದ್ದೆ ಅದನ್ನು ಕೇವಲ ೧.೫ ವರ್ಷದಲ್ಲಿ ಸೇದ ಸೇವೆ ಮಾಡಿದ್ದೇನೆ. ದೇಶದ ಅಭಿವೃದ್ದಿಯ ಸಂಕೇತ ರೈಲ್ವೆ ಎಂಬುದನ್ನು ತೋರಿಸಿಕೊಡಲಾಗುತ್ತಿದೆ ಎಂದು ಹೇಳಿದರು.

ಚಾಮರಾಜನಗರ-ಹೆಜ್ಜಾಲ, ಮೈಸೂರು-ಕುಶಾಲನಗರದ ಕಾಮಗಾರಿಗೆ ಒತ್ತಾಯ
ಚಾಮರಾಜನಗರ ಹೆಜ್ಜಾಲ, ಮೈಸೂರು ಕುಶಾಲನಗರದ ಮಾರ್ಗದ ಕಾಮಗಾರಿ ಮಾಡಲು ಆಗುವುದಿಲ್ಲ ಎಂದು ರಾಜ್ಯ ಸರ್ಕಾರ ತಿಳಿಸಿತ್ತು. ಆದರೆ, ನಾನು ಪತ್ರ ಬರೆದು ಒತ್ತಡ ಹಾಕಿದ್ದೇನೆ. ಚಾಮರಾಜನಗರದ ಸಂಸದ ಸುನೀಲ್ ಬೋಸ್ ಹಾಗೂ ಅವರ ತಂದೆ ಡಾ.ಹೆಚ್.ಸಿ.ಮಹದೇವಪ್ಪನಿಗೂ ಹೇಳಿದೆ ಏನೂ ಪ್ರಯೋಜನವಾಗಿಲ್ಲ. ೧೫ ದಿನದೊಳಗೆ ಮುಖ್ಯಮಂತ್ರಿಗಳೊಂದಿಗೆ ಮಾತನಾಡುತ್ತೇನೆ ಎಂದು ತಿಳಿಸಿದರು.

Tags:
error: Content is protected !!