Mysore
20
overcast clouds
Light
Dark

ನಂಜುಂಡೇಶ್ವರನ ಹುಂಡಿಯಲ್ಲಿ ʼ೧ ಕೋಟಿʼಗೂ ಅಧಿಕ ಹಣ ಸಂಗ್ರಹ !

ನಂಜನಗೂಡು : ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿರುವ ನಂಜನಗೂಡಿನ ನಂಜುಂಡೇಶ್ವರನ ದೇವಾಲಯದ ಹುಂಡಿಯಲ್ಲಿ ಸುಮಾರು ೧.೭೮ಕೋಟಿ ರೂ. ಸಂಗ್ರಹವಾಗಿದೆ.

ದೇವಾಲಯದ ಹುಂಡಿ ಏಣಿಕೆ ಕಾರ್ಯ ನಡೆದಿದ್ದು, ದೇವಾಲಯದ ದಾಸೋಹ ಭವನದಲ್ಲಿ ಸುಮಾರು ೩೪ ಹುಂಡಿಗಳ ಏಣಿಕೆ ಕಾರ್ಯ ನಡೆಸಲಾಯಿತು.

ಪ್ರತಿಬಾರಿಯಂತೆ ಈ ಬಾರಿಯೂ ವಿಜೃಂಭಣೆಯಿಂದ ನಡೆದ ಗೌತಮ ಪಂಚಮಹಾರಥೋತ್ಸವ ಹಾಗೂ ಹುಣ್ಣಿಮೆಯ ದಿನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.

ಈ ಹೀನಲೆಯಲ್ಲಿ ೧ಕೋಟಿ ೭೮ಲಕ್ಷದ ೨೯ಸಾವಿರದ ೬೬೭ ರೂ.ಗಳಷ್ಟು ಹುಂಡಿ ಹಣ ಸಂಗ್ರಹವಾಗಿದೆ. ಇದೇ ವೇಳೆ ೧೨೩.೮೦೦ ಗ್ರಾಂ ಚಿನ್ನ, ೪ಕೆ.ಜಿ. ೬೦೦ ಗ್ರಾಂ ಬೆಳ್ಳಿ, ೨೬ ವಿದೇಶಿ ನೋಟುಗಳು ಕಾಣಿಕೆ ರೂಪದಲ್ಲಿ ಬಂದಿವೆ.

ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ್‌ ಕುಮಾರ್‌, ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟೇಶ್‌ ಪ್ರಸಾದ್‌, ಎಇಒ ಸತೀಶ್‌, ಇಒ ಕೃಷ್ಣ, ಕೆನರಾ ಬ್ಯಾಂಕ್‌ ನಂಜನಗೂಡು ಶಾಕೆಯ ಮ್ಯಾನೇಜರ್‌ ಲಕ್ಷ್ಮಿ ಅವರ ನೇತೃತ್ವದಲ್ಲಿ ಸ್ವಸಹಾಯ ಸಂಗದ ಮಹಿಳೆಯರು ಹುಂಡಿ ಏಣಿಕೆ ಕಾರ್ಯದಲ್ಲಿ ತೊಡಗಿದ್ದರು.