ಮೈಸೂರು : ಲಿಂಗದೇವರ ಕೊಪ್ಪಲು ವೃತ್ತದಲ್ಲಿ ಅಳವಡಿಸಿದ್ದ ಸಿಎಂ ಸಿದ್ದರಾಮಯ್ಯ ನಾಮ ಫಲಕವನ್ನು ಪೊಲೀಸರು ತೆರವು ಮಾಡಿದ ಕಾರಣ ಸಿದ್ದರಾಮಯ್ಯ ಅಭಿಮಾನಿಗಳು ಪೋಲಿಸರ ವಿರುದ್ಧ ಪ್ರತಿಭಟಿಸಿ ರಸ್ತೆ ತಡೆದ ಘಟನೆ ಮೈಸೂರಿನಲ್ಲಿ ನಡೆದಿದೆ.
ಲಿಂಗದೇವರ ಕೊಪ್ಪಲು ವೃತ್ತಕ್ಕೆ ಸಿದ್ದರಾಮಯ್ಯ ಅವರ ಹೆಸರಿಡಲು ಲಿಂಗದೇವರ ಕೊಪ್ಪಲು ಗ್ರಾಮಸ್ಥರು ಮುಂದಾಗಿ ನಾಮಫಲಕ ಹಾಕಿದ್ದರು. ಆದರೆ ಪೋಲಿಸರು ಏಕಾಏಕಿ ನಾಮ ಫಲಕ ತೆರವು ಮಾಡಿದ್ದರು. ಹೀಗಾಗಿ ಪೊಲೀಸರ ವಿರುದ್ಧ ಧಿಕ್ಕಾರ ಕೂಗಿ ಗ್ರಾಮಸ್ಥರು ಹಾಗೂ ಸಿದ್ದರಾಮಯ್ಯ ಅಭಿಮಾನಿಗಳು ಪ್ರತಿಭಟನೆ ನಡೆಸಿದ್ದಾರೆ.
ಸರ್ಕಲ್‌ಗೆ ಸಿದ್ದರಾಮಯ್ಯ ನಾಮಫಲಕ ಮತ್ತೆ ಅಳವಡಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು. ಪೊಲೀಸರು ಮತ್ತು ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆಯಿತು.