ಮೈಸೂರು: ಇಲ್ಲಿನ ಕುವೆಂಪುನಗರದಲ್ಲಿ ಸಿಎಂ ಸಿದ್ದರಾಮಯ್ಯ ಕನಸಿನ ಮನೆ ತಲೆ ಎತ್ತುತ್ತಿದ್ದು, ಪ್ರಗತಿಯಲ್ಲಿರುವ ಅಂತಿಮ ಹಂತದ ಕಾಮಗಾರಿಗೆ ತಲುಪಿದೆ.
ಸಿಎಂ ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ಸಂಧ್ಯಾ ಕಾಲದಲ್ಲಿ ಸ್ವಂತ ಮನೆಯೊಂದನ್ನು ಕುವೆಂಪುನಗರದ ಜೋಡಿ ರಸ್ತೆಯಲ್ಲಿ ನಿರ್ಮಾಣ ಮಾಡಿಕೊಳ್ಳುತ್ತಿದ್ದು, ಇನ್ನೆರಡು ಮೂರು ತಿಂಗಳಲ್ಲಿ ಗೃಹ ಪ್ರವೇಶಕ್ಕೆ ಸಕಲ ಸಿದ್ಧತೆ ನಡೆಯುತ್ತಿದೆ.
ಕುವೆಂಪುನಗದಲ್ಲಿರುವ ನಿರ್ಮಾಣವಾಗುತ್ತಿರುವ ಮನೆ ದೊಡ್ಡ ಬಂಗಲೆಯಾಗಿದೆ. ಅಲ್ಲದೇ ಸಿದ್ದರಾಮಯ್ಯ ಅವರ ಮನೆಯ ಸುತ್ತ-ಮುತ್ತ ಸುಮಾರು ನೂರು ಮೀಟರ್‌ವರೆಗೂ ಬೀದಿ-ಬದಿ ವ್ಯಾಪಾರಕ್ಕೆ ನಿರ್ಬಂಧ ಹೇರಲಾಗಿದೆ.
ಈ ಮನೆಯೂ ನೆಲ ಮಹಡಿ ಸೇರಿದಂತೆ ಮೂರು ಹಂತಸ್ತಿನ ಬೃಹತ್ ಕಟ್ಟಡವಾಗಿದ್ದು, ನೂತನ ಮನೆಗೆ ಅಂತಿಮ ಹಂತದ ಸ್ಪರ್ಶ ನಡೆಯುತ್ತಿದೆ. ಅಲ್ಲದೇ ಮನೆಯೊಳಗೆ ನಡೆಯುತ್ತಿರುವ ಸುಣ್ಣ, ಬಣ್ಣ ಹಾಗೂ ಇಂಟಿರಿಯರ್ ಡೆಕೋರೇಟ್ ಕೆಲಸವೂ ಸಾಗುತ್ತಿದೆ. ಹೀಗಾಗಿ ಈ ವರ್ಷದ ಜೂನ್ ಅಥವಾ ಜುಲೈ
ತಿಂಗಳಲ್ಲಿ ಮನೆಯ ಗೃಹಪ್ರವೇಶ ಸಾಧ್ಯತೆ ಎನ್ನಲಾಗಿದೆ.





