ಮೈಸೂರು : ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ವತಿಯಿಂದ ಭಾರತದಲ್ಲೇ ಪ್ರಥಮವಾಗಿ ನಿರ್ಮಿಸಲಾಗಿರುವ ರಾಜೀವ್ ಗಾಂಧಿ ಡ್ರಾಗನ್ ಪಾಂಡ್‌ನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಸಂಜೆ ಉದ್ಘಾಟಿಸಿದರು.
ಸಂಭ್ರಮ
ರಾಜೀವ್ ಗಾಂಧಿ ಡ್ರಾಗನ್ ಪಾಂಡ್ ಪ್ರದರ್ಶನದಲ್ಲಿ ಸಿಎಂ ಸಿದ್ಧರಾಮಯ್ಯ ಅವರು ನಿರ್ಮಿಸಿರುವ ದೀರ್ಘಾವಧಿ ಮುಖ್ಯಮಂತ್ರಿ ದಾಖಲೆಯನ್ನು ವಿನೂತವಾಗಿ ಸಂಭ್ರಮಿಸಿದರು. ವಿನೂತನವಾದ ಡ್ರಾಗನ್ ಆಕ್ಷನ್ ಪ್ರದರ್ಶನ, ಪೈಯರ್ ಫಾಗ್, ಬಣ್ಣ ಬಣ್ಣದ ವಿದ್ಯುತ್ ದೀಪಗಳ ಪ್ರದರ್ಶನ, ಲೇಸರ್ ಪ್ರದರ್ಶನ ಅತ್ಯಂತ ಮನರಂಜನೀಯವಾಗಿ ಗಮನ ಸೆಳೆಯಿತು.

ಲೇಸರ್‌ನಲ್ಲಿ ಸಿದ್ಧರಾಮಯ್ಯ ಯಶೋಗಾಥೆ
ಮಾಜಿ ಮುಖ್ಯಮಂತ್ರಿ ಡಾ.ಡಿ.ದೇವರಾಜ ಅರಸ್ ಅವರ ದೀರ್ಘಾವಧಿ ಮುಖ್ಯಮಂತ್ರಿ ದಾಖಲೆ ಮುರಿದ ಪ್ರಯುಕ್ತ ೭ ವರ್ಷ ೨೩೮ ದಿನಗಳು ಮುಖ್ಯಮಂತ್ರಿಯಾಗಿರುವ ಸಿದ್ಧರಾಮಯ್ಯ ಅವರ ದಾಖಲೆಯ ನೆನಪಾರ್ಥವಾಗಿ ವಸ್ತು ಪ್ರದರ್ಶನದಿಂದ ಸಿದ್ಧರಾಮಯ್ಯ ಜೀವನ, ಬೆಳೆದು ಬಂದ ಹಾದಿ, ರಾಜಕೀಯ ಜೀವನ, ಮುಖ್ಯಮಂತ್ರಿಯಾಗಿ ನೀಡಿದ ಕೊಡುಗೆಗಳು ಕುರಿತಾಗಿ ಸಿದ್ಧರಾಮಯ್ಯ ಅವರ ಯಶೋಗಾಥೆಯನ್ನು ಲೇಸರ್ ಪ್ರದರ್ಶನದ ಮೂಲಕ ಪ್ರದರ್ಶಸಿಸಲಾಯಿತು.






