Mysore
19
broken clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಮತ್ತು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ನಡುವೆ ಮಾತಿನ ಚಕಮಕಿ

ಮೈಸೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿರುವ ಹಗರಣ ಖಂಡಿಸಿ ಬಿಜೆಪಿಯಿಂದ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಪ್ರತಿಭಟನೆಗೆ ಪ್ರತಿಯಾಗಿ ಕಾಂಗ್ರೆಸ್‌ ನಿಂದಲೂ ಕೂಡ ಮುಡಾ ಬಳಿ ಪ್ರತಿಭಟನೆ ನಡೆಸಲಾಯಿತು.

ಮುಡಾ ಬದಿಯಲ್ಲಿರುವ ಇನ್ಸ್‌ ಟಿಟ್ಯೂಟ್‌ ಆಫ್‌ ಇಂಜಿನಿಯರಿಂಗ್‌ ಮುಂಭಾಗದ ಜೆ.ಎಲ್‌.ಬಿಯ ರಸ್ತೆಯಲ್ಲಿ ʻಬಿಜೆಪಿ ಡೋಂಗಿ ಮಾರಾಟಕ್ಕೆ ಕಾಂಗ್ರೆಸ್‌ ಹೆದರುವುದಿಲ್ಲʼ ಎಂಬ ಪೋಸ್ಟರ್‌ ಹಿಡಿದು ಪ್ರತಿಭಟನೆ ನಡೆಸಿದ ಕಾಂಗ್ರೆಸ್‌ ಕಾರ್ಯಕರ್ತರು ಬಳಿಕ  ಮುಡಾಗೆ ಮುತ್ತಿಗೆ ಹಾಕಲು ಮುಂದಾದ್ರು.

ಈ ವೇಳೆ ಪೊಲೀಸ್‌ ಆಯುಕ್ತರಾದ ಸೀಮಾ ಲಾಟ್ಕರ್ ಮತ್ತು ಕೆಪಿಸಿಸಿ ವಕ್ತಾರ ಎಂ.ಲಕ್ಷಣ್‌  ನಡುವೆ ಮಾತಿನ ಚಕಮಕಿ ನಡೆಯಿತು.

ʼನಾವು ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತೇವೆ. ನಾವೇನು ಹೊಡೆದಾಟ ಮಾಡುವ ಕೆಲಸ ಮಾಡುತ್ತಿಲ್ಲ. ನಮ್ಮ ಪಾಡಿಗೆ ನಾವು ಅರ್ಧಗಂಟೆಯಲ್ಲಿ ಪ್ರತಿಭಟನೆ ಮುಗಿಸಿ ಹೋಗುತ್ತೇವೆ. ನಾವು ಯಾಕೆ ಬಿಜೆಪಿ ಜೊತೆ ಕ್ಲ್ಯಾಶ್‌ ಮಾಡಿಕೊಳ್ಳೋಣ ನಮ್ಮ ಟೈಮಿಂಗ್ಸ್‌ ಎಷ್ಟಿದೆ ಅಷ್ಟರಲ್ಲಿ ಪ್ರತಿಭಟನೆ ಮಾಡಿ ಮೆರವಣಿಗೆ ಹೋಗುತ್ತೇವೆ ಎಂದು ಲಕ್ಷ್ಮಣ್‌ ಹೇಳಿದರು.

ಇದಕ್ಕೆ ಒಪ್ಪದ ಪೊಲೀಸ್‌ ಕಮಿಷನರ್‌ ಸೀಮಾ ಲಾಟ್ಕರ್‌, ಬಿಜೆಪಿ ಮತ್ತು ಕಾಂಗ್ರೆಸ್‌ ಪ್ರತಿಭಟನೆ ಎರಡರ ನಡುವೆ ಕ್ಲ್ಯಾಶ್‌ ಆಗುವ ಸಾಧ್ಯತೆ ಇದೆ. ಪೊಲೀಸ್‌ ಭದ್ರತೆ ಕೂಡ ಮಾಡಬೇಕು. ಹಾಗಾಗಿ ಸದ್ಯಕ್ಕೆ ಸಮಯಕೊಡಿ ಪೊಲೀಸರನ್ನ ನಿಯೋಜನೆ ಮಾಡಿ ನಿಮ್ಮೊಟ್ಟಿಗೆ ಮಾತನಾಡುತ್ತೇನೆ ಎಂದು ತಿಳಿ ಹೇಳಿದರು.

ಈ ವೇಳೆ ಪೊಲೀಸ್‌ ಅಧಿಕಾರಿಯೊಬ್ಬರು ೧೦ ನಿಮಿಷ ಸುಮ್ಮನಿರಿ, ಬೇಡ ಬೇಡ ಲಕ್ಷ್ಮಣ್‌ ಎಂದಿದ್ದಕ್ಕೆ ಕೋಪಗೊಂಡ ಲಕ್ಷ್ಮಣ್‌, ಏನ್ರೀ ನನ್ನನ್ನ ಕೊಂದು ಬಿಡುತ್ತಾರಾ ಬೇಡ ಬೇಡ ಅನ್ನೋದಿಕ್ಕೆ. ಕಮಿಷನರ್‌ ಏನು ಮೇಲ್ಗಡೆಯಿಂದ ಬಂದಿದ್ದಾರಾ..? ಅವರು ಪಬ್ಲಿಕ್‌ ಸರ್ವೆಂಟ್‌, ನಮ್ಮ ಮಾತು ಕೇಳಬೇಕು. ಯಾಕೆ ಅವರು ಹೋಗುತ್ತಿದ್ದಾರೆ.  ಯಾವುದೇ ಕಾರಣಕ್ಕೂ ಅವರು ಹೋಗಬಾರದು ಎಂದು ಕಿಡಿಕಾರಿದರು.

ಲಕ್ಷ್ಮಣ್‌ ಮಾತನೆಲ್ಲಾ ಪಕ್ಕದಲ್ಲೆ ನಿಂತು ಕೇಳಿಸಿಕೊಂಡ ಕಮಿಷನರ್‌  , ನನಗೆ ಈ ರೀತಿ ಮಾಡೊಕ್ಕೆ ಬರಲ್ಲ, ನಾನು ಅಲ್ಲಿಗೆ ಹೋಗಿ ಫೋನ್‌ ಮಾಡಿ ಹೇಳ್ತೀನಿ ಎಂದು ಸ್ಥಳದಿಂದ ನಿರ್ಗಮಿಸಿ ಬಿಜೆಪಿ ಪ್ರತಿಭಟನೆ ಮಾಡುತ್ತಿದ್ದ ಸ್ಥಳಕ್ಕೆ ತೆರಳಿದರು.

 

Tags: