ತಿ ನರಸೀಪುರ : ಪಟ್ಟಣದ ನೀರು ಶುದ್ದೀಕರಣ ಘಟಕದಲ್ಲಿ ಅಲ್ಪ ಪ್ರಮಾಣದಲ್ಲಿ ಕೋರಿನ್ ಸೋರಿಕೆ ಆಗಿ ಇಲ್ಲಿನ ಸುತ್ತಮುತ್ತ ನಾಗರಿಕರು ಆತಂಕಕ್ಕೆ ಒಳಗಾಗಿರುವ ಘಟನೆ ನಡೆದಿದೆ. ಪಟ್ಟಣದ ಜೋಡಿ ರಸ್ತೆಯ ಪಿ ಡಬ್ಲ್ಯೂಡಿ ವಸತಿ ಗೃಹದ ಬಳಿ ಇರುವ ನೀರು ಶುದ್ಧೀಕರಣ ಘಟಕದಲ್ಲಿ ಅಲ್ಪ ಪ್ರಮಾಣದಲ್ಲಿ ಸೋರಿಕೆಯಾಗುತ್ತಿರುವುದರಿಂದ ಯಾವುದೇ ಹಾನಿ ಉಂಟಾಗಿಲ್ಲ. ಕೂಡಲೇ ಎಚ್ಚೆತ್ತ ಪುರಸಭೆ, ನಗರ, ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಇಂಜಿನಿಯರ್‌ಗಳು ಪೊಲೀಸ್ ಇಲಾಖೆ ಹಾಗೂ ಅಗ್ನಿ ಶಾಮಕ ಇಲಾಖೆಯವರು ಶುದ್ಧೀಕರಣ ಘಟಕಕ್ಕೆ ಯಾರೂ ಹೋಗದಂತೆ ಎಚ್ಚರ ವಹಿಸಿದ್ದಾರೆ.