ಮೈಸೂರು : ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ದೊಡ್ಡ ಹೊನ್ನುರು ಗ್ರಾಮದಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಗ್ರಾಮಸ್ಥರಲ್ಲಿ ಭಯ ಭೀತಿ ಉಂಟಾಗಿದೆ.
ಭಾನುವಾರ ರಾತ್ರಿ ಗ್ರಾಮದ ರಸ್ತೆ ಬದಿಯಲ್ಲಿ ಚಿರತೆ ಕಾಣಿಸಿಕೊಂಡಿದೆ. ಇದನ್ನು ಕಂಡ ವಾಹನ ಸವಾರರು ಬೆಚ್ವಿ ಬಿದ್ದಿದ್ದಾರೆ.
ಚಿರತೆಯು ಕೆಲಕಾಲ ರಸ್ತೆ ಬದಿಯಲ್ಲೇ ಕುಳಿತಿದೆ. ಇದು ಸುತ್ತ ಮುತ್ತಲಿನ ಗ್ರಾಮಸ್ಥರಿಗೂ ಭಯ ಉಂಟು ಮಾಡಿದೆ.
ಇದನ್ನೂ ಓದಿ:- ಕಬಿನಿ : ಹುಲಿಯನ್ನ ಅಟ್ಟಿಸಿದ ಒಂಟಿ ಸಲಗ
ಚಿರತೆ ಕಾಣಿಸಿಕೊಂಡ ಹಿನ್ನೆಲೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನಿಡೀದ್ದು , ಚಿರತೆ ಸೆರೆಗೆ ಮನವಿ ಮಾಡಿದ್ದಾರೆ.





