Mysore
27
haze

Social Media

ಮಂಗಳವಾರ, 24 ಫೆಬ್ರವರಿ 2026
Light
Dark

ಚೆನ್ನೈ: ಕೆಲಸ ಕೊಡಿಸುವ ನೆಪದಲ್ಲಿ ಮೈಸೂರಿನ ಯುವತಿಗೆ ಲೈಂಗಿಕ ದೌರ್ಜನ್ಯ

ಚೆನ್ನೈ: ಕೆಲಸ ಕೊಡಿಸುವುದಾಗಿ ನಂಬಿಸಿ ಮೈಸೂರು ಮೂಲದ 19 ವರ್ಷದ ಯುವತಿಯೊರ್ವಳ ಮೇಲೆ ವ್ಯಕ್ತಿಯೊಬ್ಬ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ.

ಈ ಘಟನೆ ಸಂಬಂಧ ಚೆನ್ನೈ ಪೊಲೀಸರು ಆರೋಪಿ ಹಾಗೂ ಸಹಚರಳನ್ನು ಬಂಧಿಸಿದ್ದಾರೆ. ವೆಲ್ಲೂರು ಮೂಲದ ಸತೀಶ್(32) ಬಂಧಿತ ಆರೋಪಿ. ಈತನ ಸಹಚರೆ ಎನ್ನಲಾದ ಮಡಿಪಾಕ್ಕಾಂ ಮೂಲದ ಶಕೀಲಾ(33) ಎಂಬಾಕೆಯನ್ನೂ ಸಹ ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಸತೀಶ್‌ ಲಾರಿ ಚಾಲಕನಾಗಿ ಕರ್ತವ್ಯ ನಿರ್ವಹಿಸುತಿದ್ದ. ಇಬ್ಬರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಜೈಲಿಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿದುಬಂದಿದೆ.

ಘಟನೆ ವಿವರ:
ಯುವತಿಯು ತನ್ನ ತಂದೆ ತಾಯಿಯನ್ನು ಕೊಯಮ್ಮತ್ತೂರಿನಲ್ಲಿ ಬಿಟ್ಟು. ಉದ್ಯೋಗ ಹರಸಿ ಚೆನ್ನೈಗೆ ಬಂದಿದ್ದಳು. ಚೆನ್ನೈನ ಕೋವಿಲಂಬಾಕ್ಕಂನಲ್ಲಿರುವ ಸ್ನೇಹಿತರ ಮನೆಗೆ ತೆರಳಿದ್ದಳು. ಯುವತಿ ಬಳಿಕ ಮೈಸೂರಿಗೆ ಹೋಗಬೇಕೆಂದು ನಿರ್ಧರಿಸಿ ಬಸ್‌ ನಿಲ್ದಾಣಕ್ಕೆ ಆಗಮಿಸಿದ್ದಳು.

ಈ ವೇಳೆ ವ್ಯಕ್ತಿಯೊರ್ವ ಯುವತಿಯನ್ನು ಪರಿಚಯ ಮಾಡಿಕೊಂಡು, ನಿನಗೆ ಉದ್ಯೋಗ ಕೊಡಿಸುತ್ತೇನೆ ಎಂದು ನಂಬಿಸಿದ್ದಾನೆ. ಅಲ್ಲದೇ, ಕೆಲಸ ಸಿಗುವವರೆಗೂ ತನ್ನ ಸ್ನೇಹಿತೆಯ ಮನೆಯಲ್ಲಿ ಇರುವಂತೆ ಹೇಳಿದ್ದನು. ಇದನ್ನೇ ನಂಬಿದ ಯುವತಿ ವ್ಯಕ್ತಿ ಹೇಳಿದ ಅರುಂಬಕ್ಕಂನಲ್ಲಿರುವ ಮನೆಯೊಂದಕ್ಕೆ ತಂಗಲು ಹೋದಳು.

ಆದರೆ, ಅಲ್ಲಿಗೆ ತಲುಪಿದ ಬಳಿಕ ಮನೆ ಬಾಗಿಲು ಹಾಕಿ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಈ ವೇಳೆ ಆರೋಪಿಯ ಗೆಳತಿ ಶಕೀಲಾ ಕೂಡ ಅಲ್ಲಿಯೇ ಇದ್ದಳು ಎನ್ನಲಾಗಿದೆ.

ನಂತರ ಸಂತ್ರಸ್ತೆ ಯುವತಿಯು ಮೊಬೈಲ್‌ ಮೂಲಕ ಪೊಲೀಸ್‌ರನ್ನು ಸಂಪರ್ಕಿಸಿ, ತನ್ನ ಮೇಲೆ ನಡೆದ ಕೃತ್ಯದ ಬಗ್ಗೆ ದೂರು ನೀಡಿದ್ದಾಳೆ. ಅಂತಯೇ, ಕೊಯಂಬೆಡು ಮಹಿಳಾ ಪೊಲೀಸರು ಬಂದು ಸಂತ್ರಸ್ತೆಯನ್ನು ರಕ್ಷಿಸಿದ್ದಾರೆ.

ಯುವತಿ ದೂರಿನ ಮೇರೆಗೆ ಪೊಲೀಸರು ತನಿಖೆ ನಡೆಸಿ, ದುರುಳ ಆರೋಪಿಗಳನ್ನು ಬಂಧಿಸಿದ್ದಾರೆ.

 

Tags:
error: Content is protected !!