ಮೈಸೂರು :ಇಲ್ಲಿನ ಜಯಪುರ ಹೋಬಳಿ ಉದ್ಬೂರು ಸಮೀಪವಿರುವ ತಳ್ಳೂರು ಗ್ರಾಮದ ಮನೆಯೊಂದರ ಸುತ್ತ ಚಿರತೆ ಸಂಚರಿಸುವ ದೃಶ್ಯ ಸಿಸಿ ಟಿವಿ ಕ್ಯಾಮರಾದದಲ್ಲಿ ಸೆರೆಯಾಗಿದೆ.
ಗ್ರಾಮದ ನಿವಾಸಿ ರವಿಕುಮಾರ್ ಅವರ ಮನೆಯ ಬಳಿ ಭಾನುವಾರ ಮುಂಜಾನೆ ಸುಮಾರು ೩.೧೫ ನಿಮಿಷದಲ್ಲಿ ಚಿರತೆ ಮನೆಯ ಬಳಿ ಸಂಚರಿಸಿ ಕೋಳಿ ಹಾಗೂ ಜಾನುವಾರುಗಳನ್ನು ತಿನ್ನಲು ಹುಡುಕಾಟ ನಡೆಸಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಚಿರತೆ ಗ್ರಾಮದೊಳಕ್ಕೆ ಬಂದಿರುವುದನ್ನು ಕಂಡ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮವಹಿಸಿ ಚಿರತೆಗಳನ್ನು ಸೆರೆ ಹಿಡಿಯಬೇಕು ಎಂದು ಮನವಿ ಮಾಡಿದ್ದಾರೆ.