Mysore
29
scattered clouds

Social Media

ಭಾನುವಾರ, 22 ಫೆಬ್ರವರಿ 2026
Light
Dark

ಚನ್ನಪಟ್ಟಣ ಉಪ ಚುನಾವಣೆ: ನಾನೇ ಅಭ್ಯರ್ಥಿ ಎಂದ ಡಿಸಿಎಂ ಡಿ.ಕೆ.ಶಿವಕುಮಾರ್‌

ಮೈಸೂರು: ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಾನೇ ಅಭ್ಯರ್ಥಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಸ್ವಯಂ ಘೋಷಿಸಿಕೊಂಡಿದ್ದಾರೆ.

ನಗರದ ಮಂಡಕಹಳ್ಳಿಯಲ್ಲಿ ಇಂದು(ಅಕ್ಟೋಬರ್‌.13) ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಸ್ವಲ್ಪ ಮಟ್ಟಿಗೆ ನಮ್ಮ ಪಕ್ಷಕ್ಕೆ ಹಿನ್ನಡೆಯಾಗಿ ಸೋಲಬೇಕಾಯಿತು. ಆದರೆ ಈಗ ಪಕ್ಷವನ್ನು ನಾವು ಬಲಪಡಿಸುವ ಕೆಲಸವನ್ನು ಮಾಡುತ್ತಿದ್ದೇವೆ. ಬಳಿಕ ಚನ್ನಪಟ್ಟಣ ಉಪ ಚುನಾವಣೆಯ ಹಿನ್ನೆಲೆಯಲ್ಲಿ ಚನ್ನಪಟ್ಟಣ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಬಲಗೊಳಿಸುತ್ತಿದ್ದೇನೆ ಎಂದರು.

ಈ ವೇಳೆಯಲ್ಲಿ ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಾನೇ ಅಭ್ಯರ್ಥಿಯಾಗಲಿದ್ದೇನೆ. ನನ್ನ ವಿರುದ್ಧ ಎನ್‌.ಡಿ.ಎ.ಅಭ್ಯರ್ಥಿ ಚುನಾವಣೆಗೆ ಸ್ಪರ್ಧಿಸುತ್ತಾರೋ ಅಥವಾ ಇನ್ಯಾರು ಸ್ಪರ್ಧಿಸುತ್ತಾರೋ ನನಗೆ ತಿಳಿಯದು. ಹೀಗಾಗಿ ನಾನು ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ನನ್ನ ಹೆಸರಿನಲ್ಲೇ ನಾನು ಮತ ಕೇಳುತ್ತೇನೆ ಎಂದು ಹೇಳಿದರು.

Tags:
error: Content is protected !!