ನಂಜನಗೂಡು : ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ಖಂಡಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ನಂಜನಗೂಡು ತಾಲೂಕು ಘಟಕದ ವತಿಯಿಂದ ರಸ್ತೆ ತಡೆದು ಪ್ರತಿಭಟನೆ ನಡೆಸಲಾಯಿತು.
ನಂಜನಗೂಡಿನ ಅಪೋಲೋ ಸರ್ಕಲ್ ನಲ್ಲಿ ಮೈಸೂರು ಊಟಿ ರಸ್ತೆ ತಡೆದು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ರಸ್ತೆ ತಡೆದು ಪ್ರತಿಭಟನೆ ನಡೆಸಲಾಯಿತು.
ಕಬಿನಿ ಕಾವೇರಿ ನೀರು ಉಳಿಯಲಿ ತಮಿಳುನಾಡು ಏಜೆಂಟಾಗಿ ವರ್ತಿಸುತ್ತಿರುವ ನೀರಾವರಿ ಮಂತ್ರಿಗೆ ದಿಕ್ಕಾರ ಎಂಬ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.ಇದೇ ವೇಳೆ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬರಡನಪುರ ನಾಗರಾಜ್ ಮಾತನಾಡಿ ಅಧಿಕಾರಕ್ಕೂ ಮುಂಚೆ ಇದ್ದ ಉತ್ಸಾಹ ನೀರಾವರಿ ಮಂತ್ರಿಗೆ ಈಗ ಏಕೆ ಇಲ್ಲ ಮೇಕೆದಾಟು ವಿಚಾರದಲ್ಲಿ ಪಾದಯಾತ್ರೆ ಮಾಡುವಾಗ ನಾವು ಅಧಿಕಾರಕ್ಕೆ ಬಂದ ತಕ್ಷಣ ಮೇಕೆದಾಟು ಯೋಜನೆಗೆ ಹಣ ಇಡುತ್ತೇವೆ ಎಂದು ಹೇಳಿದ್ದ ಮಂತ್ರಿಗಳು ಈಗ ಯಾಕೆ ಆ ಕೆಲಸ ಮಾಡಲಿಲ್ಲ ರೈತರ ಬೆಳೆಗಳಿಗೆ ಈಗಾಗಲೇ ರಾಜ್ಯ ಸರ್ಕಾರ ಮರಣ ಶಾಸನ ಬರೆದಿದೆ ಇನ್ನು ಉಳಿದಿರುವ ನೀರನ್ನು ಜನ ಜಾನುವಾರುಗಳಿಗೆ ಮತ್ತು ನಗರ ವಾಸಿಗಳಿಗೆ ನೀರು ಕೊಡುವಂತ ಕೆಲಸ ಮಾಡಬೇಕು ಅದನ್ನು ಬಿಟ್ಟು ತಮಿಳುನಾಡು ಮುಖ್ಯಮಂತ್ರಿ ಯೊಂದಿಗೆ ಒಪ್ಪಂದ ಮಾಡಿಕೊಂಡು ನಮ್ಮ ರಾಜ್ಯಕ್ಕೆ ಬಳಸಬೇಕಾದ ನೀರನ್ನು ತಮಿಳುನಾಡಿಗೆ ಬಿಡುತ್ತಿರುವುದು ರಾಜ್ಯಕ್ಕೆ ಮಾಡುತ್ತಿರುವ ದ್ರೋಹ ಕೂಡಲೇ ನೀರಾವರಿ ಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಸಂಪುಟದಿಂದ ಕೈಬಿಡಬೇಕು ರೈತರ ಹಿತ ಕಾಯದ ನೀರಾವರಿ ಮಂತ್ರಿ ನಮಗೆ ಬೇಡ ಎಂದು ಆಗ್ರಹಿಸಿದರು.
ನಂತರ ಮಾತನಾಡಿದ ತಾಲೂಕು ಅಧ್ಯಕ್ಷ ಹಾಡ್ಯ ರವಿ,ರಾಜ್ಯ ಸರ್ಕಾರ ಕಬಿನಿ ಕಾವೇರಿ ಭಾಗದ ನಾಳೆಗಳಿಗೆ ಮತ್ತು ಕೆರೆಕಟ್ಟೆ ಗಳಿಗೆ ನೀರನ್ನು ಹರಿಸದೆ ಅಚ್ಚುಕಟ್ಟು ಬಾಗದ ಶಾಸಕರೇ ರಾಜ್ಯದ ಮುಖ್ಯಮಂತ್ರಿ ಆಗಿದ್ದು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಸರ್ಕಾರದ ಸಮರ್ಪಕ ವಾದವನ್ನು ಮಂಡಿಸದೆ ಈ ಭಾಗದ ರೈತರನ್ನು ಬಲಿಕೊಟ್ಟು ಅಧಿಕಾರಕ್ಕಾಗಿ ತಮಿಳ್ನಾಡು ಸರಕಾರದ ಬಾಂಧವ್ಯದಿಂದ ಕಬಿನಿ ಕಾವೇರಿ ಭಾಗದ ರೈತರು ಬರದ ಛಾಯೆಯಿಂದ ನರಳುವಂತೆ ರಾಜ್ಯ ಸರ್ಕಾರ ಮಾಡಿದೆ ಅಧಿಕಾರ ಮುಖ್ಯವಲ್ಲ ರಾಜ್ಯದ ಜನರ ಹಿತ ಮುಖ್ಯ ತಕ್ಷಣ ತಮಿಳುನಾಡಿಗೆ ಹರಿಯುವ ನೀರನ್ನು ನಿಲ್ಲಿಸಿ ಈ ಭಾಗದ ಅಂತರ್ಜಲ ಅಲ್ಪ ಸ್ವಲ್ಪ ಬೆಳೆಗಳಿಗೆ ಹಾಗೂ ಜನಜಾನುವಾರುಗಳಿಗೆ ಕುಡಿಯಲು ನೀರನ್ನು ಉಳಿಸಬೇಕು ಪ್ರತಿ ಎಕರೆಗೆ 25,000 ನಷ್ಟ ಪರಿಹಾರವನ್ನು ರಾಜ್ಯ ಸರ್ಕಾರ ಘೋಷಣೆ ಮಾಡಬೇಕು ಏಕೆಂದರೆ ಒಂದು ಕಡೆ ನೀರು ಇಲ್ಲ ಇನ್ನೊಂದು ಕಡೆ ಬೆಳೆಯು ಇಲ್ಲ ಇಂಥ ಪರಿಸ್ಥಿತಿಯಲ್ಲಿ ರಾಜ್ಯ ಕೇಂದ್ರ ಸರ್ಕಾರಗಳು ಮಧ್ಯಪ್ರವೇಶ ಮಾಡಿ ತಮಿಳುನಾಡಿಗೆ ಹಾಗೂ ಸುಪ್ರೀಂಕೋರ್ಟಿ ಗೆ ವಸ್ತು ಸ್ಥಿತಿಯನ್ನು ಅರಿವು ಉಂಟು ಮಾಡಿ ರಾಜ್ಯದ ಜನರನ್ನು ಜಲ ಸಂಕಷ್ಟ ಪರಿಸ್ಥಿತಿಯಿಂದ ರಕ್ಷಿಸಬೇಕೆಂದು ಎಂದು ಒತ್ತಾಯಿಸಿದರು
ಪ್ರತಿಭಟನೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ಕೆರೆಹುಂಡಿ ರಾಜಣ್ಣ, ಜಿಲ್ಲಾ ಮಹಿಳಾಧ್ಯಕ್ಷೆ ಕಮಲಮ್ಮ, ಅಮ್ ಆದ್ಮಿ ಪಕ್ಷದ ತಾಲೂಕು ಅಧ್ಯಕ್ಷ ವೀರೇಶ್ ಕುಮಾರ್, ಹನುಮಯ್ಯ, ಕಬ್ಬು ಬೆಳೆಗಾರರ ಸಂಘದ ಮುಖಂಡರಾದ ಅಂಬಳೆ ಮಂಜುನಾಥ್, ಮಹದೇವಸ್ವಾಮಿ, ಕೆರೆಹುಂಡಿ ಶಿವಣ್ಣ, ಕಸುವಿನಹಳ್ಳಿ ಮಂಜೇಶ್, ದೇವನೂರು ವಿಜೇಂದ್ರ, ನಾಗೇಂದ್ರ ಸ್ವಾಮಿ, ತಗಡೂರು ಮಾದೇವಪ್ಪ, ಹಲ್ಲರೆ ಮಾದೇವ ನಾಯಕ, ಅಂಬಳೆ ಶಿವರಾಜು, ಮಲ್ಲೇಶ್, ಪ್ರಭುಸ್ವಾಮಿ, ಸೋಮಣ್ಣ, ಮುದ್ದಳ್ಳಿ ರೇವಣ್ಣ, ಪುಟ್ಟಸ್ವಾಮಿ, ನಂದಗುಂದಪುರ ಸೋಮಣ್ಣ, ಸಿದ್ದಪ್ಪ, ಒಳಗೆರೆ ಮಹದೇವಸ್ವಾಮಿ, ಹೊಸಪುರ ಮಾದೇವಪ್ಪ, ಇನ್ನು ಮುಂತಾದವರು ಭಾಗವಹಿಸಿದ್ದರು.