Mysore
24
haze

Social Media

ಭಾನುವಾರ, 21 ಡಿಸೆಂಬರ್ 2025
Light
Dark

ಮರಕ್ಕೆ ಕಾರು ಡಿಕ್ಕಿ ; ಇಬ್ಬರು ಸಾವು

accident case Two dead

ಹೊಸೂರು: ರಸ್ತೆಯಲ್ಲಿದ್ದ ಗುಂಡಿಗೆ ಇಳಿದ ಓಮ್ನಿ ಕಾರು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಇಬ್ಬರು ಮೃತಪಟ್ಟಿರುವ ಘಟನೆ ಸಾಲಿಗ್ರಾಮ ತಾಲ್ಲೂಕಿನ ಬೈಲಾಪುರ ಗ್ರಾಮದ ಬಳಿ ಚುಂಚನಕಟ್ಟೆ ಮುಖ್ಯರಸ್ತೆಯಲ್ಲಿ ನಡೆದಿದೆ.

ಹಾಸನದ ಲಕ್ಷ್ಮೀಪುರಂ ಬಡಾವಣೆಯ ಕಲೀಮ್ ರೆಹಮಾನ್ (೬೫) ಮತ್ತು ಶೇಕ್ ಅಬ್ದುಲ್ ಖಾದರ್ (೪೫) ಸ್ಥಳದಲ್ಲಿಯೇ ಮೃತಪಟ್ಟವರು.

ಹಾಸನ ಕಡೆಯಿಂದ ಚುಂಚನಕಟ್ಟೆಗೆ ತೆರಳುವ ರಸ್ತೆಯಲ್ಲಿ ಪೈಪ್‌ಲೈನ್‌ಗಾಗಿ ಗುಂಡಿ ತೆಗೆಯಲಾಗಿದ್ದು ಅದನ್ನು ಸೂಕ್ತವಾಗಿ ಮುಚ್ಚದ ಕಾರಣ ಆ ಗುಂಡಿಯಲ್ಲಿ ಇಳಿದ ಕಾರು (ಕೆಎ೧೩ ಪಿ ೦೭೬೦) ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ.

ಕಾರಿನಲ್ಲಿದ್ದ ಶೇಕ್ ಮುನೀರ್ ಅಹ್ಮದ್ ಎಂಬವರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಸಾಲಿಗ್ರಾಮ ಠಾಣೆಯ ಪೊಲೀಸರು ಭೇಟಿ ನೀಡಿ ಸ್ಥಳ ಪರಿಶೀಲಿಸಿ, ರಸ್ತೆಯಲ್ಲಿ ಗುಂಡಿ ತೆಗೆದು ಅಪಘಾತವಾಗಲು ಕಾರಣವಾದವರ ಮೇಲೆ ದೂರು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Tags:
error: Content is protected !!