Mysore
15
clear sky

Social Media

ಮಂಗಳವಾರ, 09 ಡಿಸೆಂಬರ್ 2025
Light
Dark

ಉಪ ಚುನಾವಣೆ; ಮೂರು ಕ್ಷೇತ್ರಗಳಲ್ಲೂ ನಮ್ಮದೆ ಗೆಲುವು; ಎಚ್‌ಸಿಎಂ

ಸಿ.ಪಿ.ಯೋಗೇಶ್ವರ್‌ ಕಾಂಗ್ರೆಸ್‌ ಸೇರ್ಪಡೆಯಾಗಿದ್ದಕ್ಕೆ ಸಂತೋಷ; ಸಚಿವ ಮಹದೇವಪ್ಪ 

ಮೈಸೂರು: ಸಿ.ಪಿ.ಯೋಗೇಶ್ವರ್‌  ಕಾಂಗ್ರೆಸ್‌ ಸೇರ್ಪಡೆಯಾಗಿರುವುದು ಸಂತೋಷದ ವಿಚಾರ. ಮೂರು ವಿಧಾನಸಭಾಕ್ಷೇತ್ರಗಳ ಉಪ ಚುನಾವಣೆಯಲ್ಲಿ ನಮ್ಮ ಪಕ್ಷ ಗೆಲುವು ಸಾಧಿಸುವ ವಿಶ್ವಾಸವಿದೆ ಎಂದು ಜಿಲ್ಲಾ ಉಸ್ತುವಾರಿ ಎಚ್‌.ಸಿ.ಮಹದೇವಪ್ಪ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚನ್ನಪಟ್ಟಣ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸಲು ನಮ್ಮ ಪಕ್ಷದಿಂದ ಅನೇಕ ಜನ ಅಭ್ಯರ್ಥಿಗಳಿದ್ದರು. ಆದರೂ ನಮ್ಮ ಪಕ್ಷ ಬೇರೆ ಪಕ್ಷದಿಂದ ಬಂದ ಅಭ್ಯರ್ಥಿಗೆ ಟಿಕೆಟ್‌ ನೀಡಿದ್ದೇವೆ ಎಂದರೆ ನಮ್ಮ ಪಕ್ಷದ ಉದಾರತನವನ್ನು ಗಮನಿಸಬೇಕು. ಅಲ್ಲದೇ, ಉಪ ಚುನಾವಣೆಯ ಮಿನಿ ಸಮರದಲ್ಲಿ ಮೂರು ಕ್ಷೇತ್ರಗಳಲ್ಲೂ ನಮ್ಮ ಪಕ್ಷವೇ ಗೆಲ್ಲುತ್ತದೆ ಎಂದು ಹೇಳಿದರು.

ಆಡಳಿತ ಚುರುಕು

ಇನ್ನೂ ಮೂಡಾ ವಿಚಾರವಾಗಿ ಮಾತನಾಡಿದ ಸಚಿವರು, ಮುಡಾದಲ್ಲಿ ಕೆಲವು ಕೆಲಸಗಳು ಸ್ಥಗಿತವಾಗಿಯೇ. ಅವುಗಳನ್ನು ಶುರು ಮಾಡಿ ಎಂದು ಜಿಲ್ಲಾಧಿಕಾರಿಗೆ ತಿಳಿಸಿದ್ದೇನೆ. ದಸರಾ ಮುಗಿದಿದೆ. ಆಡಳಿತದಲ್ಲಿ ಚುರುಕುಗೊಳಿಸಲು ಸೂಚಿಸಲಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಗಳ ಸಭೆ ನಡೆಸಿದ್ದೇನೆ ಎಂದು ಹೇಳಿದರು.

Tags:
error: Content is protected !!