Mysore
14
overcast clouds

Social Media

ಶನಿವಾರ, 20 ಡಿಸೆಂಬರ್ 2025
Light
Dark

ಅಮಾವಾಸ್ಯೆ ಪ್ರಯುಕ್ತ ಗಜಪಡೆ ತಾಲೀಮಿಗೆ ಬ್ರೇಕ್

ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾ 2023 ಮಹೋತ್ಸವ ಯಶಸ್ವಿಗೊಳಿಸಲು ಕಾಡಿನಿಂದ ನಾಡಿಗೆ ಬಂದ ಗಜಪಡೆ ಅರಮನೆ ಆವರಣದಲ್ಲಿ ರಿಲ್ಯಾಕ್ಸ್ ಮೂಡ್ ನಲ್ಲಿವೆ. ಇಂದು ಅಮಾವಾಸ್ಯೆ ಹಿನ್ನಲೆ ತಾಲೀಮಿಗೆ ಬ್ರೇಕ್ ನೀಡಲಾಗಿದೆ.

ಅಭಿಮನ್ಯು ತಂಡಕ್ಕೆ ಅರ್ಜುನ ಇಂದು ಸೇರ್ಪಡೆಯಾಗಿದೆ .ಬಳ್ಳೆ ಶಿಬಿರದಿಂದ ಅರ್ಜುನ ಮೈಸೂರು ಅರಮನೆಗೆ ಎಂಟ್ರಿ ಕೊಟ್ಟಿದ್ದಾನೆ.ಹುಲಿ ಕೂಂಬಿಂಗ್ ಆಪರೇಷನ್ ನಲ್ಲಿ ಭಾಗಿಯಾಗಿದ್ದ ಅರ್ಜುನ ಇಂದು ಗಜಪಡೆಗೆ ಸೇರಿಕೊಂಡಿದ್ದಾನೆ.ಆನೆಗಳ ಮಜ್ಜನಕ್ಕೆ ವಿಶೇಷ ವ್ಯವಸ್ಥೆ ಮಾಡಲಾಗಿದೆ.

ಅರಮನೆ ಆವರಣದಲ್ಲಿ ವ್ಯವಸ್ಥೆ ಮಾಡಿದ ನೀರಿನ ಹೊಂಡದಲ್ಲಿ ದಸರಾ ಗಜಪಡೆಗಳ ಜಳಕ ಗಮನಸೆಳೆದಿದೆ. ಪುಟಾಣಿಯೊಂದು ಭೀಮ ಆನೆಗೆ ಸ್ನಾನ ಮಾಡಿಸಿ ಖುಷಿಪಟ್ಟಿದೆ. ಅರಮನೆಯಲ್ಲಿ ಬಿಂದಾಸ್ ಆಗಿರುವ ಆನೆಗಳು ರಿಲ್ಯಾಕ್ಸ್ ಮೂಡ್ ನಲ್ಲಿವೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!