Mysore
22
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಟ್ರಾಕ್ಟರ್‌ನ ರೂಟರ್‌ಗೆ ಸಿಲುಕಿ ಬಾಲಕ ಸಾವು; ನಂಜನಗೂಡಿನಲ್ಲಿ ದುರಂತ

ನಂಜನಗೂಡು : ಟ್ರಾಕ್ಟರ್‌ನ ರೂಟರಿಗೆ ಸಿಲುಕಿ ಬಾಲಕ ಮೃತಪಟ್ಟ ದುರಂತ ಘಟನೆ ನಂಜನಗೂಡು ತಾಲೂಕಿನ ದೇವರಸನಹಳ್ಳಿ ಗ್ರಾಮದಲ್ಲಿ ನಡೆದಿದೆ.

ರಜಾ ಹಿನ್ನೆಲೆಯಲ್ಲಿ ತನ್ನ ಅಜ್ಜಿ ಮನೆಗೆ ಬಂದಿದ್ದ ಭವಿಷ್ (8) ಮೃತ ದುರ್ದೈವಿ. ತಾಯಿ ಮಮತಾ ದೇವರಸಹಳ್ಳಿಯಿಂದ ಚಾಮರಾಜನಗರಕ್ಕೆ ಮದುವೆಯಾಗಿದ್ದು ಶಾಲಾ ರಜೆ ಕಳೆಯಲು ತನ್ನ ಎರಡು ಮಕ್ಕಳೊಂದಿಗೆ ತವರೂರು ದೇವರಸನಹಳ್ಳಿಗೆ ಬಂದಿದ್ದಾಗ ಈ ಘಟನೆ ನಡೆದಿದೆ.

ಬಾಲಕನ ಸೋದರ ಮಾವ ನನ್ನ ತಂಗಿಯ ಎರಡು ಮಕ್ಕಳನ್ನು ಜಮೀನಿಗೆ ಕರೆದುಕೊಂಡು ಹೋಗಿ ಟ್ರಾಕ್ಟರ್‌ನಲ್ಲಿ ಕುಳ್ಳಿರಿಸಿಕೊಂಡು ಜಮೀನಿನಲ್ಲಿ ಉಳುಮೆ ಮಾಡುವ ಸಂದರ್ಭದಲ್ಲಿ ಬಾಲಕ ಭವಿಷ್ ಅಯತಪ್ಪಿ ಟ್ರ್ಯಾಕ್ಟರ ಕೆಳಗೆ ಬಿದ್ದು ರೂಟರಿಗೆ ಸಿಲುಕಿದಾಗ ದೇಹ ತುಂಡು ತುಂಡಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

Tags: