ಮೈಸೂರು : ಹೊಸದಿಲ್ಲಿ ಬಾಂಬ್ ಬ್ಲಾಸ್ಟ್ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಭದ್ರತೆ ಬಿಗಿ ಗೊಳಿಸುವ ಕೆಲಸ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕೆಡಿಪಿ ಸಭೆ ಬಳಿಕ ಮಾತನಾಡಿದ ಅವರು, ಎಲ್ಲಾ ಜಿಲ್ಲಾ ಕೇಂದ್ರ, ಬೆಂಗಳೂರು ಕೇಂದ್ರದ ವಿಮಾನ ನಿಲ್ದಾಣ, ಬಸ್ ನಿಲ್ದಾಣ ಜನ ಸಾಂದ್ರತೆ ಇರುವ ಎಲ್ಲಾ ಪ್ರದೇಶದಲ್ಲಿ ಭದ್ರತೆ ಬಿಗಿಗೊಳಿಸುವಂತೆ ಸೂಚಿಸಿದ್ದೇವೆ. ಜತೆಗೆ ಮೈಸೂರು- ಬೆಂಗಳೂರು ಪೊಲೀಸರ ಜತೆ ಮಾತನಾಡಿದ್ದೇನೆ ಎಂದರು.
ಇನ್ನು ಸ್ಪೋಟದಲ್ಲಿ ಮೃತರಾದ ಕುಟುಂಬ ವರ್ಗದವರಿಗೆ ಸಂತಾಪ ವ್ಯಕ್ತಪಡಿಸಿದ ಸಿಎಂ, ನಾನು ಬೆಳಿಗ್ಗೆ ಇಂದ ಕೆಡಿಪಿ ಸಭೆಯಲ್ಲಿದ್ದೆ, ಏನಾಗಿದೆ ಎಂದು ಮಾಹಿತಿ ತಿಳಿದುಕೊಂಡು ಪೂರ್ಣ ಮಾಹಿತಿ ಬಳಿಕ ಪ್ರತಿಕ್ರಿಯಿಸುತ್ತೇನೆ ಎಂದರು.
ಭದ್ರತೆ ಕುರಿತಂತೆ ಕೇಂದ್ರದಿಂದ ಯಾವುದೇ ಸೂಚನೆಗಳು ಬಂದಿಲ್ಲ ಎಂದು ಹೇಳಿದರು.





