Mysore
13
clear sky

Social Media

ಶನಿವಾರ, 13 ಡಿಸೆಂಬರ್ 2025
Light
Dark

ಸುತ್ತೂರು ಜಾತ್ರೆ ಪ್ರಯುಕ್ತ ಕಪಿಲಾ‌ ನದಿಯಲ್ಲಿ ದೋಣಿ ವಿಹಾರ

ಸುತ್ತೂರು : ಸುತ್ತೂರು ಜಾತ್ರಾ ಮಹೋತ್ಸವದ ಅಂಗವಾಗಿ ಕಪಿಲಾ ನದಿ ದಂಡೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ದೋಣಿ ವಿಹಾರ ಆಯೋಜಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಸುತ್ತೂರು ಶ್ರೀ ಕ್ಷೇತ್ರದ ಆಡಳಿತಾಧಿಕಾರಿ ಎಸ್.ಪಿ.ಉದಯ್ ಶಂಕರ್ ಅವರು ಕುಟುಂಬ ಸಮೇತ ಆಗಮಿಸಿ ದೋಣಿ ವಿಹಾರ ಮಾಡಿದರು.

ಬಳಿಕ‌ ಪ್ರತಿಕ್ರಿಯೆ ನೀಡಿದ ಅವರು ದೋಣಿ ವಿಹಾರಕ್ಕಾಗಿ ನಗರ ಪ್ರದೇಶಗಳಿಗೆ ಹೋಗಬೇಕು. ಹೀಗಿರುವಾಗ ಇಲ್ಲಿ ಅವಕಾಶ ಕಲ್ಪಿಸಿರುವುದು ಗ್ರಾಮೀಣ ಭಾಗದ ಜನರಲ್ಲಿ ಸಂತೋಷ ತಂದಿದೆ ಎಂದರು.

ಪ್ರತಿ ವರ್ಷವೂ ಸುತ್ತೂರು ಜಾತ್ರೆಯ ಪ್ರಯುಕ್ತ ಕಪಿಲಾ ನದಿಯಲ್ಲಿ ದೋಣಿ ವಿಹಾರ ಆಯೋಜಿಸಲಾಗುತ್ತದೆ. ವರ್ಷದಿಂದ ವರ್ಷಕ್ಕೆ ಭಕ್ತಾದಿಗಳು ಜಾಸ್ತಿಯಾಗುತ್ತಿದ್ದಾರೆ. ಸರ್ಕಾರದ ಶಕ್ತಿ ಯೋಜನೆಯ ಪರಿಣಾಮ ಭಕ್ತಾದಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎಂದರು.

ಎಲ್ಲರ ಸಹಕಾರದಿಂದ ಯಾವುದೇ ಸಮಸ್ಯೆಯಾಗದಂತೆ ಎಲ್ಲಾ ವ್ಯವಸ್ಥೆ ಮಾಡಲಾಗಿದೆ ಅಂತ ತಿಳಿಸಿದರು.

ಈ ಸಂದರ್ಭದಲ್ಲಿ ಆಡಳಿತಾಧಿಕಾರಿಗಳ ಕುಟುಂಬದವರಾದ ಡಾ.ಮಹೇಶನ್, ಡಾ.ಎಸ್.ಯು.ಹರಪ್ರಸಾದ್, ಪ್ರೊ. ಎಂ.ಎಸ್.ಅಭಿನಂದನ್‌ ಹಾಗೂ ಕುಟುಂಬದವರಿದ್ದರು.

ಇನ್ನು ಶಾಲಾ‌ಮಕ್ಕಳು, ಭಕ್ತಾದಿಗಳು ದೋಣಿ ವಿಹಾರ ಮಾಡಿ‌ ಆನಂದಿಸಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!