ಮೈಸೂರು : ಬೈಕ್, ಟ್ಯಾಕ್ಸಿಗಳಿಗೆ ಸೂಕ್ತ ನೀತಿಯನ್ನು ರೂಪಿಸುವಂತೆ ಒತ್ತಾಯಿಸಿ ಒಂದು ಸಾವಿರಕ್ಕೂ ಹೆಚ್ಚು ಬೈಕ್, ಟ್ಯಾಕ್ಸಿ ಚಾಲಕರು ಶನಿವಾರ ಮೈಸೂರಿನಿಂದ ವಿಧಾನಸೌಧ ಚಲೋ ಹೊರಟರು.
ಮೈಸೂರು, ಮಂಡ್ಯ, ಹಾಸನ, ದಾವಣಗೆರೆ, ತುಮಕೂರು, ರಾಮನಗರ, ಶಿವಮೊಗ್ಗ ಮತ್ತು ಕನಕಪುರ ದಂತಹ ನಗರಗಳಿಂದ 5,000 ಕ್ಕೂ ಹೆಚ್ಚು ರೈಡರ್‌ಗಳು ಬೆಂಗಳೂರಿನ ವಿಧಾನಸೌಧದತ್ತ ಪ್ರಯಾಣ ಬೆಳೆಸಿದರು.
ಈ ವೇಳೆ ಬೈಕ್ ಟ್ಯಾಕ್ಸಿ ರೈಡರ್ ರವಿ ಮಾತನಾಡಿ, ಬೈಕ್, ಟ್ಯಾಕ್ಸಿಗಳು ಕರ್ನಾಟಕದ ಸಾರಿಗೆ ವ್ಯವಸ್ಥೆಯ ಪ್ರಮುಖ ಭಾಗವಾಗಿದ್ದು, ಸಾವಿರಾರು ಮಂದಿಗೆ ಉದ್ಯೋಗಗಳನ್ನು ಒದಗಿಸುತ್ತಿವೆ. ಆದರೆ, ರೈಡರ್‌ಗಳ ಜೀವನ ತುಂಬಾ ಕಷ್ಟದಲ್ಲಿದ್ದು, ಅವರ ಜೀವನ ನಿರ್ವಹಣೆಗೆ ಸೂಕ್ತ ವ್ಯವಸ್ಥೆ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.





