ಹುಣಸೂರು: ಮೈಸೂರು ಜಿಲ್ಲೆ ಹುಣಸೂರು ಪಟ್ಟಣದಲ್ಲಿ ನಡೆದ ಚಿನ್ನಾಭರಣ ದರೋಡೆ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ.
ಮಾಹಿತಿ ಪ್ರಕಾರ ದರೋಡೆಕೋರರು ಕದ್ದಿದ್ದು 7 ಕೆಜಿ ಅಲ್ಲ, ಬರೋಬ್ಬರಿ 10 ಕೆಜಿ ಎಂಬ ಮಾಹಿತಿ ಲಭ್ಯವಾಗಿದೆ.
ಚಿನ್ನದಂಗಡಿ ಮಾಲೀಕ ರಶೀದ್ ಎಂಬುವವರು ಕಳೆದ ಆರು ತಿಂಗಳ ಹಿಂದೆಯಷ್ಟೇ ಕೇರಳದಲ್ಲಿ 5 ಕೆಜಿ ಚಿನ್ನ ಖರೀದಿ ಮಾಡಿದ್ದರು. ಖರೀದಿ ವಿಚಾರದಲ್ಲಿ ಉಂಟಾದ ಮನಸ್ತಾಪವೇ ಕಳ್ಳತನಕ್ಕೆ ಕಾರಣವಾಗಿದೆ ಎಂಬ ಅನುಮಾನ ಮೂಡಿದೆ.
ಇನ್ನು ಮೊತ್ತೊಂದು ಮಾಹಿತಿ ಪ್ರಕಾರ ರಾಬರಿ ಮಾಡಿದ್ದ ಗ್ಯಾಂಗ್ ಕೇರಳದ್ದು ಎನ್ನಲಾಗಿದ್ದು, ಕೇರಳದಲ್ಲೇ ದರೋಡೆಕೋರರು ಬಂದೂಕು ಖರೀದಿ ಮಾಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಪ್ರಕರಣದ ತನಿಖೆ ನಡೆಯುತ್ತಿದ್ದು, ಮೈಸೂರು ಪೊಲೀಸರು ಕೇರಳಕ್ಕೆ ತೆರಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.





