ಹುಣಸೂರು: ನಾಗರಹೊಳೆ ಅರಣ್ಯದಲ್ಲಿ ಸಫಾರಿಗೆ ತೆರಳಿದ್ದ ಪ್ರವಾಸಿಗರ ಕಣ್ಣಿಗೆ ಕರಡಿಯೊಂದು ತನ್ನ ಮರಿಗಳ ಜೊತೆ ಸಂಚಾರ ಮಾಡುತ್ತಿರುವ ದೃಶ್ಯ ಗೋಚರಿಸಿದ್ದು, ಪ್ರವಾಸಿಗರು ಫುಲ್ ಖುಷ್ ಆಗಿದ್ದಾರೆ.
ಇದನ್ನೂ ಓದಿ:- ಧಾರವಾಡ ಹುಡುಗ, ಮೈಸೂರಿನ ಹುಡುಗಿ; ಇಬ್ಬರ ಮಧ್ಯೆ ‘ಮಾತೊಂದ ಹೇಳುವೆ’
ನಾಗರಹೊಳೆಯ ಚಿಕ್ಕಪಾಲ ಕೆರೆ ಸಮೀಪ ಕರಡಿಯೊಂದು ತನ್ನ ಮರಿಗಳ ಜೊತೆ ಸಂಚಾರ ಮಾಡಿದ್ದು, ಮರಿ ಕರಡಿಯು ತಾಯಿಯ ಬೆನ್ನ ಮೇಲೆ ಕುಳಿತು ಸವಾರಿ ಮಾಡಿದೆ. ಈ ದೃಶ್ಯವನ್ನು ಚಾಲಕ ಭೈರಾ ಅವರು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣಕ್ಕೆ ಹರಿಬಿಟ್ಟಿದ್ದಾರೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದ್ದು, ಕರಡಿಗಳ ದೃಶ್ಯವನ್ನು ನೋಡಿ ನೆಟ್ಟಿಗರು ವಿವಿಧ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.





