Mysore
30
clear sky

Social Media

ಮಂಗಳವಾರ, 11 ಮಾರ್ಚ್ 2025
Light
Dark

ಸಿಎಂ ಸಿದ್ದರಾಮಯ್ಯಗೆ ಬಂಡೆಯೇ ಪ್ರಾಬ್ಲಂ: ʼಡಿಕೆಶಿʼಗೆ ನಿಖಿಲ್‌ ಟಾಂಗ್‌

ಮೈಸೂರು: ಸಿಎಂ ಸಿದ್ದರಾಮಯ್ಯ ಅವರಿಗೆ ಬಂಡೆಯೇ ಸಮಸ್ಯೆ ಎಂದು ಜೆಡಿಎಸ್‌ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಡಿಸಿಎಂ ಡಿಕೆ ಶಿವಕುಮಾರ್‌ಗೆ ಟಾಂಗ್‌ ನೀಡಿದ್ದಾರೆ.

ಪಾದಯಾತ್ರೆಯ ಕೊನೆದಿನ ಮೈಸೂರಿನಲ್ಲಿ ಮಾತನಾಡಿದ ಅವರು, ಮೈತ್ರಿ ಪಾದಯಾತ್ರೆಗೆ ಉತ್ತಮವಾಗಿ ಜನಬೆಂಬಲ ಸಿಕ್ಕಿದೆ ಎಂದು ಹೇಳಿದರು.

ನಿನ್ನೆ ಭಾಷಣದಲ್ಲಿ ಡಿಕೆ ಶಿವಕುಮಾರ್‌ ಮಾತನಾಡುತ್ತಾ, ಸಿದ್ದರಾಮಯ್ಯ ಹಿಂದೆ ಬಂಡೆ ಇದೆ ಎಂದಿದ್ದಾರೆ. ಆದರೆ, ಈ ಬಂಡೆಯೇ ಸಿದ್ದರಾಮಯ್ಯಗೆ ಪ್ರಾಬ್ಲಂ. ಡಿಕೆಶಿ ಮುಖವಾಡ ಹಾಕಿ ಒಳಗೊಂದು ಹೊರಗೊಂದು ಮಾತನಾಡುತ್ತಿದ್ದಾರೆ. ಈಗಾಗಲೇ ಬಂಡೆ ಮುಖ್ಯಮಂತ್ರಿ ಕುರ್ಚಿಗೆ ಟವಲ್‌ ಹಾಕಿಕೊಂಡು ಕುಳಿತಿದೆ. ಈ ಬಂಡೆ ಯಾವಾಗ ಬೇಕಾದರೂ ಸಿದ್ದರಾಮಯ್ಯ ಮೇಲೆ ಬೀಳಬಹುದು ಎಂದು ಹೇಳಿದರು.

 

Tags: