Mysore
26
broken clouds

Social Media

ಬುಧವಾರ, 10 ಡಿಸೆಂಬರ್ 2025
Light
Dark

ಎಲ್‌ಪಿಜಿ ಗ್ಯಾಸ್‌ ಸಿಲಿಂಡರ್‌ಗೆ 50 ರೂ. ಬೆಲೆ ಏರಿಕೆ ಸಮರ್ಥಿಸಿಕೊಂಡ ಬಿ.ವೈ.ವಿಜಯೇಂದ್ರ

ಮೈಸೂರು: ಕೇಂದ್ರ ಸರ್ಕಾರದಿಂದ ಎಲ್‌ಪಿಜಿ ಗ್ಯಾಸ್‌ ಸಿಲಿಂಡರ್‌ಗೆ 50 ರೂ ಗ್ಯಾಸ್ ಬೆಲೆ ಏರಿಕೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಮರ್ಥಿಸಿಕೊಂಡಿದ್ದಾರೆ.

ಮೈಸೂರಿನಲ್ಲಿ ಇಂದು(ಏಪ್ರಿಲ್‌.8) ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಎಲ್‌ಪಿಜಿ ಗ್ಯಾಸ್‌ ಸಿಲಿಂಡರ್‌ಗೆ 50 ರೂ. ಬೆಲೆ ಏರಿಕೆ ಕೇಂದ್ರ ಸರ್ಕಾರದಿಂದ ಪೆಟ್ರೋಲ್‌ ಮತ್ತು ಡಿಸೇಲ್‌ ಅಬಕಾರಿ ಸುಂಕವನ್ನು 2 ರೂ.ಹೆಚ್ಚಳ ಮಾಡಿದೆ. ಈ ವಿಚಾರಗಳ ಬಗ್ಗೆ ಕೇಂದ್ರ ಸಚಿವರೇ ಮಾಹಿತಿ ನೀಡಿದ್ದಾರೆ. ಅಲ್ಲದೇ ಅಂತಾರಾಷ್ಟ್ರೀಯ ಮಾರಕಟ್ಟೆಯಲ್ಲಿ ಕಚ್ಚಾ ತೈಲದಲ್ಲಿ ಬೆಲೆ ಹೆಚ್ಚಾಗಿದ್ದರಿಂದ ನಮ್ಮ ದೇಶದಲ್ಲೂ ಗ್ಯಾಸ್‌, ಪೆಟ್ರೋಲ್‌ ಮತ್ತು ಡಿಸೇಲ್‌ ದರ ಏರಿಸಿದೆ. ಆದರೆ ಈ ಬೆಲೆಯಿಂದ ದೇಶದ ಜನತೆಗೆ ಹೊರೆಯಾಗಲ್ಲವೆಂದು ಕೇಂದ್ರ ಸರ್ಕಾರವವೇ ಸ್ಪಷ್ಟನೆ ನೀಡಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.

ಈ ದೇಶದ ಕಡುಬಬಡವರು ಕೂಡ ಗ್ಯಾಸ್‌ ಬಳಸಬೇಕೆಂಬ ಹಿತದೃಷ್ಟಿಯಿಂದ ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ಉಜ್ವಲ ಯೋಜನೆಯನ್ನು ಅನುಷ್ಠಾನಗೊಳಿಸಿದರು. ಉಜ್ವಲ ಯೋಜನೆ ಗ್ಯಾಸ್‌ ಸಿಲಿಂಡರ್‌ 503 ಇದಿದ್ದು 553 ಆಗಿದೆ. ಇನ್ನೂ ಜನ ಸಾಮಾನ್ಯರು ಬಳಸುವಂತಹ ಸಿಲಿಂಡರ್‌ 803 ಇದ್ದದ್ದು 853 ರೂ. ಆಗಿದೆ. ನಾನು ರಾಜ್ಯದ ಜನತೆಗೆ ಗಮನಕ್ಕೆ ತರುವುದೇನೆಂದರೆ 2023ರ ಮಾರ್ಚ್‌ನಲ್ಲಿ ಒಂದು ಸಿಲಿಂಡರ್‌ನ ಬೆಲೆ 1,107 ರೂ. ಇತ್ತು. ಆದರೆ ಇಂದು ಬೆಲೆ ಏರಿಕೆಯಾಗಿದ್ದರೂ ಪ್ರತಿ ಸಿಲಿಂಡರ್‌ಗೆ 853 ರೂ. ಇದೆ.ಒಂದು ವೇಳೆ ರಾಹುಲ್ ಗಾಂಧಿ ಪ್ರಧಾನಿಯಾಗಿದ್ದರೆ ಗ್ಯಾಸ್ ಬೆಲೆ 2500 ಇರುತ್ತಿತ್ತು. ಮೋದಿ ಇರುವ ಕಾರಣ 850 ರೂ ಇದೆ ಎಂದು ಹೇಳಿದರು.

Tags:
error: Content is protected !!