ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (MUDA) ನೂತನ ಆಯುಕ್ತರಾಗಿ ಅರುಳ್ ಕುಮಾರ್ ಹಾಗೂ ಮೈಸೂರು ನಗರ ಪಾಲಿಕೆ (MCC)ಹೆಚ್ಚುವರಿ ಆಯುಕ್ತರಾಗಿ ಕುಸುಮಾಕುಮಾರಿ ನೇಮಕಗೊಳಿಸಿ ಆದೇಶ ಹೊರಡಿಸಲಾಗಿದೆ.
ಈ ಹಿಂದಿನ ಆಯುಕ್ತರಾಗಿದ್ದ ಜಿ.ಟಿ ದಿನೇಶ್ ಕುಮಾರ್ ಸ್ಥಾನಕ್ಕೆ ಸರ್ಕಾರದ ಆರ್ಥಿಕ ಇಲಾಖೆಯ ಉಪ ಕಾರ್ಯದರ್ಶಿ (ಆಡಳಿತ ಮತ್ತು ಸಮನ್ವಯ) ಅರುಳ್ ಕುಮಾರ್ ಅವರನ್ನು ಮುಡಾ ಆಯುಕ್ತರಾಗಿ ಮತ್ತು ಮೈಸೂರು ನಗರ ಪಾಲಿಕೆಯ ಹೆಚ್ಚುವರಿ ಆಯುಕ್ತರಾಗಿ ಎಂ.ಜೆ ರೂಪಾ ಅವರ ಸ್ಥಾನಕ್ಕೆ ಚಿಕ್ಕ ಬಳ್ಳಾಪುರ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿಯಾದ ಕುಸುಮ ಕುಮಾರಿ ಎಸ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.






