Mysore
27
clear sky

Social Media

ಸೋಮವಾರ, 29 ಡಿಸೆಂಬರ್ 2025
Light
Dark

ಕೈ ಶಾಸಕ ಹರೀಶ್‌ಗೌಡಗೆ ಹನಿಟ್ರ್ಯಾಪ್‌ ಮಾಡಿದ್ದ ಆರೋಪಿಗಳ ಬಂಧನ

ಮೈಸೂರು: ಚಾಮರಾಜ ಕ್ಷೇತ್ರದ ಶಾಸಕ ಹರೀಶ್‌ಗೌಡರಿಗೆ ಹನಿಟ್ರ್ಯಾಪ್ ಮೂಲಕ ಬ್ಲ್ಯಾಕ್‌ ಮೇಲೆ ಮಾಡಿದ್ದ  ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ಮತ್ತೊಬ್ಬ ಆರೋಪಿ ನಾಪತ್ತೆಯಾಗಿದ್ದಾನೆ.

ಮೈಸೂರು ಮೂಲದ ಸಂತೋಷ್ ಹಾಗೂ ಪುಟ್ಟರಾಜು ಬಂಧಿತ ಆರೋಪಿಗಳು. ಈ ಮೂವರ ಗ್ಯಾಂಗ್‌ ಜೊತೆ ಓರ್ವ ಯುವತಿ ಭಾಗಿಯಾಗಿದ್ದಾರೆ ಎಂದು ಸಿಸಿಬಿ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಆರೋಪಿಗಳ ಗ್ಯಾಂಗ್‌ ಕೈ ಶಾಸಕ ಹರೀಶ್‌ಗೌಡ ಅವರ ವಿರುದ್ಧವೇ ನಕಲಿ ಹನಿಟ್ರ್ಯಾಪ್‌ ಮಾದರಿ ವಿಡಿಯೋ ಸೃಷ್ಟಿಸಿ ಬೆದರಿಕೆ ಹಾಕಿ, ಕೋಟ್ಯಾಂತರ ಹಣಕ್ಕೆ ಬೇಡಿಕೆ ಇಟ್ಟಿದರು. ಈ ಬಗ್ಗೆ ಶಾಸಕರು ಬೆಂಗಳೂರಿನ ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದರು. ದೂರಿನ್ವಯ ಕೇಸ್‌ ದಾಖಲು ಮಾಡಿಕೊಂಡ ಸಿಸಿಬಿ ಪೊಲೀಸರು ಹನಿಟ್ರ್ಯಾಪ್‌ ಮಾಡುತ್ತಿದ್ದ ಜಾಲವನ್ನು ಭೇಧಿಸಿ, ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳ ವಿಚಾರಣೆ ವೇಳೆ ಹಲವಾರು ವಿಚಾರಗಳು ಬೆಳಕಿಗೆ ಬಂದಿವೆ. ಈ ಗ್ಯಾಂಗ್‌ ವಿಐಪಿಗಳನ್ನೇ ಟಾರ್ಗೆಟ್‌ ಮಾಡುತ್ತಿದ್ದರು. ಅವರನ್ನೇ ಫಾಲೋ ಮಾಡಿ ಅವರ ಚಲನವಲನದ ಮೇಲೆ ಕಣ್ಣಿಟ್ಟು, ಬಳಿಕ ಅವರು ಉಳಿದುಕೊಳ್ಳುತ್ತಿದ್ದ ಐಷಾರಾಮಿ ಹೋಟೆಲ್ ರೂಮ್‌ ಬುಕ್ಕಿಂಗ್‌ ಹಾಗೂ ಚೆಕ್-ಇನ್‌, ಚೆಕ್-ಔಟ್‌ ಬಗ್ಗೆ ಮಾಹಿತಿ ಪಡೆಯುತ್ತಿದ್ದರು. ಬಳಿಕ ಆರೋಪಿಗಳು ಅದೇ ರೂಮ್‌ಗಳನ್ನೇ ಬಾಡಿಗೆ ಪಡೆದು ಅಲ್ಲಿಯೇ ಉಳಿದುಕೊಂಡು, ವಿಐಪಿಗಳ ಈ ಯುವತಿಯನ್ನು ಬಳಸಿಕೊಂಡಿದ್ದಾರೆ ಎಂದು ನಕಲಿ ವಿಡಿಯೋ ಸೃಷ್ಟಿಸುತ್ತಿದ್ದರು. ಬಳಿಕ ಆ ವಿಡಿಯೋವನ್ನು ವಿಐಪಿಗಳಿಗೆ ಕಳುಹಿಸಿ, ಹಣಕ್ಕಾಗಿ ಬೇಡಿಕೆ ಇಡುತ್ತಿದ್ದರು. ಅಷ್ಟೆ ಅಲ್ಲದೇ ಹಣ ನೀಡದಿದ್ದರೇ ವಿಡಿಯೋ ವೈರಲ್‌ ಮಾಡಿ ಜೊತೆಗೆ ಪೊಲೀಸರಿಗೆ ಕೊಡುವುದಾಗಿ ಬ್ಲ್ಯಾಕ್‌ ಮೇಲೆ ಮಾಡುತ್ತಿದ್ದರು ಎಂದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

ಪ್ರಕರಣ ಸಂಬಂಧ ಶಾಸಕ ಹರೀಶ್‌ಗೌಡ ಮಾತನಾಡಿ, ನನ್ನ ಪರಿಚಿತರು ಹಾಗೂ ಗೌರವಯುತವಾಗಿ ಬದುಕುತ್ತಿರುವವರಿಗೆ ಹನಿಟ್ರ್ಯಾಪ್‌ ಮಾಡಲಾಗಿತ್ತು. ಎರಡು ನಂಬರ್‌ಗಳಿಂದ ಕರೆ ಮಾಡುತ್ತಿದ್ದರು. ಆ ನಂಬರ್‌ ಮೂಲಕ ಟ್ರೇಸ್‌ ಮಾಡಿ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ನಾನೇ ದೂರು ನೀಡಿದ್ದೆ. ಇಬ್ಬರ ಬಂಧನವಾಗಿದೆ. ತನಿಖೆ ನಡೆಯುತ್ತಿದ್ದು, ಕಾನೂನಾತ್ಮಕವಾಗಿ ಏನು ಆಗಬೇಕು ಆಗುತ್ತದೆ ಎಂದು ಹೇಳಿದರು.

ಹೆಚ್ಚುವರಿ ಪೊಲೀಸ್‌ ಆಯುಕ್ತ ಡಾ.ಚಂದ್ರಗುಪ್ತ ಮಾತನಾಡಿ, ಕೆಲ ದಿನಗಳ ಹಿಂದೆ ಸಿಸಿಬಿ ಠಾಣೆಗೆ ಹನಿಟ್ರ್ಯಾಪ್‌ ಬಗ್ಗೆ ದೂರು ಬಂದಿತ್ತು. ದೂರು ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿ ಅವರ ಹೇಳಿಕೆ ಪಡೆದುಕೊಳ್ಳುತ್ತಿದ್ದೇವೆ. ಈ ಗ್ಯಾಂಗ್‌ನಲ್ಲಿ ಮೂವರು ಇರುವುದು ಗೊತ್ತಾಗಿದೆ. ಇಬ್ಬರ ಬಂಧನವಾಗಿದ್ದು, ಇನ್ನೊಬ್ಬ ಪರಾರಿಯಾಗಿದ್ದಾನೆ. ಉದ್ಯಮಿಗಳು ಹಾಗೂ ಉಪನ್ಯಾಸಕರಿಗೂ ಕರೆ ಮಾಡಿ ಗ್ಯಾಂಗ್‌ ಹಣಕ್ಕೆ ಬೇಡಿಕೆ ಇಟ್ಟಿದೆ. ಕಾನೂನು ಕ್ರಮ ಆಗಲಿದೆ ಎಂದರು.

 

 

 

 

 

Tags:
error: Content is protected !!