ಮೈಸೂರು: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಮೌಲಾನಾ ಆಜಾದ್ ಮಾದರಿ ಶಾಲೆ (ಆಂಗ್ಲ ಮಾಧ್ಯಮ) / ಮೊರಾರ್ಜಿ ದೇಸಾಯಿ (ನೂತನ) ವಸತಿ ಶಾಲೆ ಹಾಗೂ ಕಾಲೇಜುಗಳಲ್ಲಿ ಅತಿಥಿ ಶಿಕ್ಷಕರ ಹಾಗೂ ಉಪನ್ಯಾಸಕರ ಹುದ್ದೆಗಳು ಖಾಲಿಯಿದ್ದು, ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಪಿರಿಯಾಪಟ್ಟಣದ ಹಲಗನಹಳ್ಳಿಯ ಮೌಲಾನ ಆಜಾದ್ ಮಾದರಿ ಶಾಲೆ (ಆಂಗ್ಲ ಮಾಧ್ಯಮ) ಶಾಲೆಗೆ ಹಿಂದಿ ಮತ್ತು ಗಣಿತ ವಿಷಯಕ್ಕೆ ಬಿಎ, ಬಿ.ಇಡಿ, ಬಿಎಸ್ಸಿ, ವಿದ್ಯಾರ್ಹತೆ, ಮೈಸೂರಿನ ಭರತನಗರದ ಮೌಲಾನ ಆಜಾದ್ ಮಾದರಿ ಶಾಲೆ (ಆಂಗ್ಲ ಮಾಧ್ಯಮ) ಶಾಲೆಗೆ ಕನ್ನಡ ಮತ್ತು ವಿಜ್ಞಾನ ವಿಷಯಕ್ಕೆ ಬಿಎ, ಬಿ.ಇಡಿ, ಬಿಎಸ್ಸಿ ವಿದ್ಯಾರ್ಹತೆ, ಲಷ್ಕರ್ ಮೊಹಲ್ಲಾದ ಮೌಲಾನ ಆಜಾದ್ ಮಾದರಿ ಶಾಲೆ (ಆಂಗ್ಲ ಮಾಧ್ಯಮ) ಶಾಲೆಗೆ ದೈಹಿಕ ಶಿಕ್ಷಕ ವಿಷಯಕ್ಕೆ ಬಿ.ಪಿ.ಇಡಿ ವಿದ್ಯಾರ್ಹತೆ, ರಾಜೇಂದ್ರ ನಗರದ ಮೌಲಾನ ಆಜಾದ್ ಮಾದರಿ ಶಾಲೆ (ಆಂಗ್ಲ ಮಾಧ್ಯಮ) ಶಾಲೆಗೆ ಇಂಗ್ಲೀಷ್ ಮತ್ತು ಹಿಂದಿ ವಿಷಯಕ್ಕೆ ಬಿಎ ಅಥವಾ ಬಿಎಸ್ಸಿ, ಬಿ.ಇಡಿ, ವಿದ್ಯಾರ್ಹತೆ, ಹುಣಸೂರು ಟೌನ್‌ನ ಮೌಲಾನ ಆಜಾದ್ ಮಾದರಿ ಶಾಲೆ (ಆಂಗ್ಲ ಮಾಧ್ಯಮ) ಶಾಲೆಗೆ ಹಿಂದಿ ಮತ್ತು ದೈಹಿಕ ಶಿಕ್ಷಣ ವಿಷಯಕ್ಕೆ ಬಿಎ, ಬಿ.ಇಡಿ, ಬಿ.ಪಿ.ಇಡಿ ವಿದ್ಯಾರ್ಹತೆ, ತಿ.ನರಸೀಪುರದ ಅಲ್ಪಸಂಖ್ಯಾತರ ಮಾರಾರ್ಜಿ ದೇಸಾಯಿ ವಸತಿ ಶಾಲೆಯ(ನೂತನ) ಎಲ್ಲಾ ವಿಷಯಕ್ಕೆ, ಬಿಎ ಅಥವಾ ಬಿಎಸ್ಸಿ ಬಿ.ಇಡಿ ವಿದ್ಯಾರ್ಹತೆ, ಪಿರಿಯಾಪಟ್ಟಣ ತಾಲ್ಲೂಕಿನ ಅಲ್ಪಸಂಖ್ಯಾತರ ಮಾರಾರ್ಜಿ ದೇಸಾಯಿ ವಸತಿ ಶಾಲೆ/ ಕಾಲೇಜಿಗೆ ಇಂಗ್ಲೀಷ್ ವಿಷಯಕ್ಕೆ ಬಿಎ ಅಥವಾ ಬಿಎಸ್ಸಿ ಬಿ.ಇಡಿ ವಿದ್ಯಾರ್ಹತೆ ಹಾಗೂ ಮೈಸೂರಿನ ದೊಡ್ಡಕಾನ್ಯದ ಅಲ್ಪಸಂಖ್ಯಾತರ ಡಾ||ಎ.ಪಿ.ಜೆ ಅಬ್ದುಲ್ ಕಲಾಂ, ವಸತಿ ಕಾಲೇಜಿಗೆ ಜೀವಶಾಸ್ತ್ರ ವಿಷಯಕ್ಕೆ ಎಂಎ ಎಂ.ಎಸ್ಸಿ ಬಿ.ಇಡಿ ವಿದ್ಯಾರ್ಹತೆಯನ್ನು ಹೊಂದಿರುವ ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಮೇ 30 ಅಂತಿಮ ದಿನಾಂಕವಾಗಿದೆ.
ಆಸಕ್ತ ಅರ್ಹ ಅಭ್ಯರ್ಥಿಗಳು ಕಡೆಯ ದಿನಾಂಕದೊಳಗೆ ಜಿಲ್ಲಾ ಕಛೇರಿಗೆ ಅಥವಾ ಸಂಬoಧಪಟ್ಟ ಶಾಲೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ಜಿಲ್ಲಾ ಅಧಿಕಾರಿಗಳ ಕಛೇರಿ, ಬೆಂಗಳೂರು-ಮೈಸೂರು ರಸ್ತೆಯ ಶೋಭ ಗಾರ್ಡನ್ ಪಕ್ಕದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮೌಲಾನ ಆಜಾದ್ ಭವನವನ್ನು ಸಂಪರ್ಕಿಸಬಹುದು.
ಹೆಚ್ಚಿನ ಮಾಹಿತಿಗಾಗಿ ದೂ.ಸಂ: 0821-2422088/8951087207/8762864253, ಮೊರಾರ್ಜಿ ನೂತನ ವಸತಿ ಶಾಲೆ ತಿ.ನರಸೀಪುರ ಮಾಹಿತಿ ಕೇಂದ್ರದ ದೂ.ಸಂ: 8277775750, ಹುಣಸೂರು ಮಾಹಿತಿ ಕೇಂದ್ರದ ದೂ.ಸಂ: 9620750935 ಹಾಗೂ ಪಿರಿಯಾಪಟ್ಟಣ ಮಾಹಿತಿ ಕೇಂದ್ರದ ದೂ.ಸಂ: 6362661474 ನ್ನು ಸಂಪರ್ಕಿಸಬಹುದು ಎಂದು ಮೈಸೂರಿನ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





