ಮೈಸೂರು: 2024-25ನೇ ಸಾಲಿಗೆ ಶ್ರೀರಾಂಪುರ ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ವಾಸವಾಗಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಇತರೆ ಬಡ ಜನರು ಮತ್ತು ವಿಶೇಷಚೇತನ ಬಡಜನರಿಗೆ ವೈಯಕ್ತಿಕ ಸೌಲಭ್ಯಗಳನ್ನು ಕಲ್ಪಿಸುವ ಉದ್ದೇಶಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಅರ್ಹ ಫಲಾನುಭವಿಗಳಿಗೆ ಸರ್ಕಾರದ ವಸತಿ ಯೋಜನೆಯಡಿ ಆಯ್ಕೆ ಆಗಿ ಗೃಹ ನಿರ್ಮಾಣ ಕಾರ್ಯ ಕೈಗೊಂಡಿರುವವರಿಗೆ ಅಥವಾ ಸ್ವಂತವಾಗಿ ಗೃಹ ನಿರ್ಮಾಣ ಮಾಡಿಕೊಳ್ಳುತ್ತಿರುವ ಶೇ.24.10 ರಡಿ ಪ.ಜಾತಿಯ/ಪಂಗಡದವರಿಗೆ, ಹಾಗೂ ಶೇ.7.25 ರಡಿ ಇತರೆ ಜಾತಿಗಳ ಫಲಾನುಭವಿಗಳಿಗೆ ಸಹಾಯಧನ, ವಿಶೇಷ ಚೇತನರಿಗೆ ವಿಮೆ ಸೌಲಭ್ಯಗಳನ್ನು ಕಲ್ಪಿಸುವುದು, ವಿಶೇಷ ಚೇತನರಿಗೆ ಶೌಚಾಲಯ ನಿರ್ಮಿಸಿಕೊಳ್ಳಲು ಸಹಾಯಧನ(2023-24), ಡೇ-ನಲ್ಮ್ ಯೋಜನೆಯಡಿ ವೈಯಕ್ತಿಕ ಸಾಲ ಯೋಜನೆ-(3) ಸಂಖ್ಯೆ ಮತ್ತು ಮಹಿಳಾ ಸ್ವ-ಸಹಾಯ ಸಂಘಗಳ ರಚನೆ-(8) ಸಂಖ್ಯೆ, ಅಂಬೇಡ್ಕರ್ ಮತ್ತು ವಾಜಪೇಯಿ ವಸತಿ ಯೋಜನೆಗಳಡಿ ಮನೆ ನಿರ್ಮಿಸಿಕೊಳ್ಳಲು ಸಹಾಯಧನ ನೀಡಲಾಗುವುದು.
ಆಸಕ್ತ ಅಭ್ಯರ್ಥಿಗಳು ನಿಗಧಿತ ನಮೂನೆಯಲ್ಲಿ ಅರ್ಜಿಗಳನ್ನು ಭರ್ತಿ ಮಾಡಿ ಪೂರಕ ದಾಖಲಾತಿಗಳೊಂದಿಗೆ ಜುಲೈ 09 ಸಂಜೆ 5.00 ಗಂಟೆಯೊಳಗೆ ಕಛೇರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿ ಮತ್ತು ನಿಗಧಿತ ನಮೂನೆಯ ಅರ್ಜಿಗಳಿಗಾಗಿ ಪಟ್ಟಣ ಪಂಚಾಯ್ತಿಯ ಯೋಜನಾ ಶಾಖೆಗೆ ಭೇಟಿ ನೀಡಬಹುದು ಎಂದು ಶ್ರೀರಾಂಪುರ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ತಿಳಿಸಿದ್ದಾರೆ.




