ಮೈಸೂರು: ಗ್ರಾಹಕರಿಗೆ ಶಾಕ್ ಮೇಲೆ ಶಾಕ್ ಎದುರಾಗುತ್ತಿದ್ದು, ಈಗ ಈರುಳ್ಳಿ ದರ ದಿಢೀರ್ ಏರಿಕೆಯಾಗಿದೆ.
ಈ ಮೂಲಕ ಗ್ರಾಹಕರ ಕಣ್ಣಲ್ಲಿ ಈರುಳ್ಳಿ ಹೆಚ್ಚುವ ಮುನ್ನವೇ ಕಣ್ಣೀರು ತರಿಸುತ್ತಿದೆ.
ಕಳೆದ ವಾರವಷ್ಟೇ 50 ರಿಂದ 60 ರೂಪಾಯಿ ಇದ್ದ ಈರುಳ್ಳಿ ಬೆಳೆ ಈಗ ದಿಢೀರ್ ಹೆಚ್ಚಾಗಿದ್ದು, ಕೆಜಿಗೆ 70 ರಿಂದ 80 ರೂಪಾಯಿ ಮಾರಾಟವಾಗುತ್ತಿದೆ.
ರಾಜ್ಯದಲ್ಲಿ ಧಾರಾಕಾರ ಮಳೆಯಾಗಿರುವ ಪರಿಣಾಮ ಈರುಳ್ಳಿ ಉತ್ಪಾದನೆಯಲ್ಲಿ ತೀವ್ರ ಕುಸಿತ ಕಂಡಿದೆ. ಈ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಏರಿಕೆಯಾಗಿದ್ದು, ಜನತೆ ಕಂಗಾಲಾಗಿದ್ದಾರೆ.
ದಸರಾ ಮಹೋತ್ಸವದ ವೇಳೆ ಈರುಳ್ಳಿ ದರ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ. ಇದರ ಜೊತೆಗೆ ಬೆಳ್ಳುಳ್ಳಿ ದರ 400ರ ಗಡಿದಾಟಿದ್ದು, ಗ್ರಾಹಕರು ಜೇಬನ್ನು ಪದೇ ಪದೇ ಮುಟ್ಟಿ ನೋಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.