Mysore
23
haze

Social Media

ಶನಿವಾರ, 20 ಡಿಸೆಂಬರ್ 2025
Light
Dark

ಅಂಜಲಿ ಹತ್ಯೆ ಪ್ರಕರಣ: ಮೈಸೂರಿನಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ

ಮೈಸೂರು: ಹುಬ್ಬಳಿಯ ಅಂಜಲಿ ಹತ್ಯೆ ಆರೋಪಿ ವಿಶ್ವ ಅಲಿಯಾಸ್‌ ಗಿರೀಶ್‌ ಮೈಸೂರಿನ ಹೋಟೆಲ್‌ ಒಂದರಲ್ಲಿ ಸಪ್ಲೇಯರ್ ಆಗಿ ಕೆಲಸ ನಿರ್ವಹಿಸಿದ ಮಾಹಿತಿ ಬೆಳಕಿಗೆ ಬಂದಿದೆ.

ಮೈಸೂರಿನ ಜೆಎಲ್‌ಬಿ ರಸ್ತೆಯಲ್ಲಿರುವ ಗೋರ್ವಧನ್‌ ಎಂಬುವವವರ ಮಾಲೀಕತ್ವದ ಮಹಾರಾಜ ಹೋಟೆಲ್‌ನಲ್ಲಿ ಕಳೆದ ನಾಲ್ಕು ತಿಂಗಳಿಂದ ಸಪ್ಲೇಯರ್‌ ಆಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.

ವಿನಾಯಕ ನರ್ಸಿಂಗ್‌ ಕೇರ್‌ ಏಜೆನ್ಸಿ ಮೂಲಕ ಹೋಟೆಲ್‌ ಕೆಲಸಕ್ಕೆ ಬಂದಿದ್ದ ಆರೋಪಿ ವಿಶ್ವ ಮೊದಲಿಗೆ ನಮ್ಮ ತಂದೆ ನೋಡಿಕೊಳ್ಳಲು ನೇಮಿಸಲಾಗಿತ್ತು. ಬಳಿಕ ಇಲ್ಲಿ ಕೆಲಸ ಬಿಟ್ಟಿದ್ದ ಆರೋಪಿ ವಿಶ್ವ ಮತ್ತೆ ಬಂದು ಕೆಲಸಕ್ಕೆ ಸೇರಿಕೊಂಡನು. ಆವಾಗ ನಮ್ಮ ಹೋಟೆಲ್‌ನಲ್ಲಿ ಸಪ್ಲೇಯರ್‌‌ ಹಾಗೂ ರೂಂ ಬಾಯ್ ಗಿ ಕೆಲಸ ಮಾಡುತ್ತಿದ್ದ. ಆತ ಸರಿಯಾಗಿ ಕೆಲಸಕ್ಕೆ ಬರುತ್ತಿರಲಿಲ್ಲ. 10 ರಿಂದ 5 ದಿನ ರಜೆ ತೆಗೆದುಕೊಳ್ಳುತ್ತಿದ್ದ. ಹೀಗೆ ಬಿಟ್ಟು ಬಿಟ್ಟು ಕೆಲಸಕ್ಕೆ ಬರುತಿದ್ದ. ಕಳೆದ ಮಂಗಳವಾರ 5 ಸಾವಿರ ಹಣ ಅಡ್ವಾನ್ಸ್‌ ತೆಗೆದುಕೊಂಡು ಹೋದವನು ಮತ್ತೆ ವಾಪಸ್‌ ಬಂದಿಲ್ಲ. ಪೊಲೀಸರು ನನಗೆ ಕರೆ ಮಾಡಿದಾಗಲೇ ಈತ ಕೊಲೆ ಮಾಡಿದ್ದಾನೆ ಎಂಬುದು ತಿಳಿದಿದ್ದು ಎಂದು ಮಹರಾಜ ಹೋಟೆಲ್‌ ಮಾಲೀಕ ಗೋವರ್ಧನ್‌ ಮಾಹಿತಿ ನೀಡಿದರು.

ಆರೋಪಿ ವಿಶ್ವ ಹೆಚ್ಚು ಮಾಬೈಲ್‌ ನಲ್ಲಿ ಮಾತನಾಡುತಿದ್ದ ಎಂದು ನಮ್ಮ ಹೊಟೇಲ್‌ ಸಿಬ್ಬಂದಿ ಹೇಳಿದ್ರು, ಹೋಟೆಲ್‌ ಫೋನ್‌ನಿಂದಲೂ ಹೆಚ್ಚು ಮಾತನಾಡುತ್ತಿದ್ದ. ಘಟನೆ ನಡೆಯುವ ಹಿಂದಿನ ದಿನ ಜೋರಾಗಿ ಕೂಗಾಡಿ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದನಂತೆ. ನಮ್ಮ ಹೋಟೆಲ್‌ಗೆ ಏಳು ಮಂದಿ ಪೊಲೀಸರು ಬಂದಿದ್ರು, ನಿನ್ನೆ ರಾತ್ರಿಯ ತನಕ ಪೊಲೀಸರು ಇದ್ರು. ಆತ ದಾವಣೆಗೆರೆಯಲ್ಲಿ ಸಿಕ್ಕ ಬಳಿಕ ಮಧ್ಯರಾತ್ರಿ ಪೊಲೀಸರು ಇಲ್ಲಿಂದ ತೆರಳಿದ್ದಾರೆ ಎಂದು ಮಹಾರಾಜ ಹೋಟೆಲ್‌ ಮಾಲೀಕ ಗೋವರ್ಧನ್‌ ಹೇಳಿದ್ದಾರೆ.

Tags:
error: Content is protected !!