Mysore
18
overcast clouds

Social Media

ಭಾನುವಾರ, 11 ಜನವರಿ 2026
Light
Dark

ಬಿಜೆಪಿಯ 18 ಶಾಸಕ ಅಮಾನತು| 6 ತಿಂಗಳಲ್ಲ, 2 ವರ್ಷ ಅಮಾನತು ಮಾಡಬೇಕಿತ್ತು: ಅನಿಲ್‌ ಚಿಕ್ಕಮಾದು

ಮೈಸೂರು: ವಿಧಾನಸಭೆಯ ಸಭಾಧ್ಯಕ್ಷರು ಬಿಜೆಪಿಯ 18 ಶಾಸಕರನ್ನು ಆರು ತಿಂಗಳಲ್ಲ, ಎರಡು ವರ್ಷ ಅಮಾನತು ಮಾಡಬೇಕಿತ್ತು ಎಂದು ಶಾಸಕ ಅನಿಲ್‌ ಚಿಕ್ಕಮಾದು ಸಮರ್ಥನೆ ಮಾಡಿಕೊಂಡಿದ್ದಾರೆ.

ಮೈಸೂರಿನಲ್ಲಿ ಇಂದು(ಮಾರ್ಚ್‌.24) ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸದನದಲ್ಲಿ ಅಂದು ಬಿಜೆಪಿಯ ಶಾಸಕರು ಸಭಾಧ್ಯಕ್ಷ ಸ್ಥಾನಕ್ಕೆ ಅಗೌರವ ತೋರಿದ್ದಾರೆ. ಅಲ್ಲದೇ ಅಸಂವಿಧಾನಿಕವಾಗಿ ನಡೆದುಕೊಂಡು ಅಸಭ್ಯವಾಗಿ ವರ್ತಿಸಿದ್ದಾರೆ. ಹೀಗಾಗಿ ಆ 18 ಶಾಸಕರನ್ನು ಆರು ತಿಂಗಳ ಅಲ್ಲ, ಕನಿಷ್ಟ ಎರಡು ವರ್ಷಗಳ ಕಾಲ ಅಮಾನತು ಮಾಡಬೇಕಿತ್ತು ಎಂದು ಹೇಳಿದರು.

ಬಿಜೆಪಿ ಶಾಸಕರು ನಡೆದುಕೊಂಡ ರೀತಿ ಬಹಳ ಖಂಡನೀಯವಾಗಿದ್ದು, ನಮಗಂತು ತುಂಬಾ ಬೇಸರವನ್ನು ಉಂಟು ಮಾಡಿದೆ. ಸದನದಲ್ಲಿ ಬಿಜೆಪಿ ಶಾಸಕರ ನಡೆ ಪ್ರಜಾಪ್ರಭುತ್ವದ ವಿರೋಧಿ ನಡೆ ಎಂದರು.

ಇದೇ ಸಂದರ್ಭದಲ್ಲಿ ಹನಿಟ್ರ್ಯಾಪ್‌ ವಿಚಾರದ ಬಗ್ಗೆ ಮಾತನಾಡಿದ ಅವರು, ಈ ವಿಚಾರ ಮಾತನಾಡಲು ನಾನು ಚಿಕ್ಕವನು. ಈಗಾಗಲೇ ಸರ್ಕಾರ ಉನ್ನತಮಟ್ಟದ ತನಿಖೆ ನಡೆಸಲು ನಿರ್ಧಾರ ಮಾಡಿದೆ. ಯಾರೇ ಆಗಲಿ ಇಂತಹ ವಿಚಾರದ ಬಗ್ಗೆ ಜಾಗೃತಕತೆಯಿಂದ ಇರಬೇಕು ಎಂದು ತಿಳಿಸಿದರು.

Tags:
error: Content is protected !!