Mysore
18
mist

Social Media

ಮಂಗಳವಾರ, 23 ಡಿಸೆಂಬರ್ 2025
Light
Dark

ಮೈಸೂರು | ಅಂಬೇಡ್ಕರ್‌ ಬ್ಯಾನರ್‌ ತೆರವು : ವಿದ್ಯಾರ್ಥಿಗಳಿಂದ ಮುಂದುವರೆದ ಪ್ರತಿಭಟನೆ

protest

ಮೈಸೂರು: ಮೈಸೂರು ವಿಶ್ವವಿದ್ಯಾನಿಯದ ಮಾನಸಗಂಗೋತ್ರಿ ಆವರಣದಲ್ಲಿರುವ ಡಾ.ಬಿ.ಆರ್ ಅಂಬೇಡ್ಕರ್ ಭಾವಚಿತ್ರವನ್ನು ವಿರೂಪಗೊಳಿಸಿದವರನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಮೈಸೂರು ವಿಶ್ವವಿದ್ಯಾಲಯದ ಸಂಶೋಧಕರ ಸಂಘ ಹಾಗೂ ದಲಿತ ವಿದ್ಯಾರ್ಥಿ ಒಕ್ಕೂಟದ ಸದಸ್ಯರು ಪ್ರತಿಭಟನೆಯನ್ನು ಮಂದುವರೆಸಿದ್ದಾರೆ.

ಮಾನಸಗಂಗೋತ್ರಿಯ ಆವರಣದಲ್ಲಿ ಸಂಶೋಧಕರ ಸಂಘದಿಂದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 134ನೇ ಜನ್ಮ ದಿನದ ಅಂಗವಾಗಿ ಶುಭಕೋರಿ ಬ್ಯಾನರ್ ಅಳವಡಿಸಲಾಗಿತ್ತು. ಸಂಶೋಧಕರ ಸಂಘ ಹಾಗೂ ಯಾವುದೇ ವಿದ್ಯಾರ್ಥಿಗಳ ಗಮನಕ್ಕೂ ತಾರದೆ ಬುಧವಾರ ಸಂಜೆ ವಿಶ್ವವಿದ್ಯಾಲಯದ ಆಡಳಿತ ಸಿಬ್ಬಂದಿ ಬ್ಯಾನರ್‌ ತೆರವು ಮಾಡಿದ್ದರು. ವಿ.ವಿ ಆಡಳಿತ ದಲಿತ ವಿರೋಧಿ ಹಾಗೂ ಅಂಬೇಡ್ಕರ್ ವಿರೋಧಿ ಮನಸ್ಥಿತಿ ತೋರುತಿದೆ. ಅಂಬೇಡ್ಕರ್‌ ಭಾವಚಿತ್ರವನ್ನು ವಿರೂಪಗೊಳಿಸಿದವರನ್ನು ಬಂಧಿಸಬೇಕು ಎಂದು ಒತ್ತಾಯಿಸಿ ವಿದ್ಯಾರ್ಥಿಗಳು ರಾತ್ರಿಯಿಡಿ ಪ್ರತಿಭಟಿಸಿದರು.

ಟಯರ್‌ ಸುಟ್ಟು ಆಕ್ರೋಶ
ತಡರಾತ್ರಿ ಟಯರ್‌ ಸುಟ್ಟು ಆಕ್ರೋಶ ವ್ಯಕ್ತಪಡಿಸಿದ ಸಂಘಟನೆಯ ಮುಖಂಡರು ಹಾಗೂ ವಿದ್ಯಾರ್ಥಿಗಳು ಬ್ಯಾನರ್‌ ತೆರವುಗೊಳಿಸಿದ್ದವರನ್ನು ಬಂಧಿಸಬೇಕು ಎಂದು ಜಯಲಕ್ಷ್ಮಿಪುರಂ ಠಾಣೆಗೆ ದೂರು ನೀಡಿದ್ದು, ಎಫ್‌ಐಆರ್‌ ದಾಖಲಾಗಿದೆ.

ಕುಲಪತಿಗಳನ್ನು ವಜಾಗೊಳಿಸಿ
ಇನ್ನೂ ಗುರುವಾರ ಬೆಳಿಗ್ಗೆನಿಂದಲೇ ಕ್ಲಾಕ್‌ ಟವರ್‌ ಹಾಗೂ ವಿ.ವಿ ಪ್ರಮುಖ ಕಡೆಗಳಲ್ಲಿ ರಸ್ತೆ ತಡೆಗಟ್ಟಿ ಪ್ರತಿಭಟಿಸಿದರು. ರಾಜ್ಯಸರ್ಕಾರ ಕುಲಪತಿಗಳನ್ನು ವಜಾಗೊಳಸಿಬೇಕು. ಆಡಳಿತಾಧಿಕಾರಿ ರಾಮಚಂದ್ರ ಅವರನ್ನು ಅಮಾತನು ಮಾಡಬೇಕು. ಘಟನಾ ಸ್ಥಳಕ್ಕೆ ಬಾರದ ಕುಲಪತಿ, ಕುಲಸಚಿವರಿಗೆ ಧಿಕ್ಕಾರ ಎಂಬಿತ್ಯಾಧಿ ಘೋಷಣೆ ಕೋಗಿ ಆಕ್ರೋಶ ವ್ಯಕ್ತಪಡಿಸಿದರು.

ಬಿಗಿ ಬಂದೋಬಸ್ತ್‌
ಮಾನಸ ಗಂಗೋತ್ರಿ ಆವರಣದ ಸುತ್ತಲೂ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದಾರೆ. ಆವರಣಕ್ಕೆ ಪ್ರವೇಶಿಸುವವರನ್ನು ಖುದ್ದು ಪೊಲೀಸರೇ ಪರಿಶೀಲಿಸಿ ವಿಶ್ವವಿದ್ಯಾಲಯದ ಆವರಣಕ್ಕೆ ಬಿಡುತ್ತಿದ್ದಾರೆ.

Tags:
error: Content is protected !!