ಮೈಸೂರು: ನಿನ್ನೆ(ಆ.10)ದೋಸ್ತಿಗಳಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಚಾಟಿ ಬೀಸಿ, ಸರ್ಕಾರದ ಶಕ್ತಿ ಪ್ರದರ್ಶನ ಮಾಡಿದ್ದರು. ಅದೇ ರೀತಿ ಇಂದು ರಾಜ್ಯ ಸರ್ಕಾರಕ್ಕೆ ತಿರುಗೇಟು ಕೊಡಲು ಮೈತ್ರಿ ನಾಯಕರು ಸಹ ಸಜ್ಜಾಗಿದ್ದಾರೆ.
ಶುಕ್ರವಾರ(ಆ.9) ಕಾಂಗ್ರೆಸ್ ಶಕ್ತಿ ಪ್ರದರ್ಶನ ನಡೆಸಿದ ನಗರದ ಮಹಾರಾಜ ಕಾಲೇಜು ಮೈದಾನದ ಬೃಹತ್ ವೇದಿಕೆಯಲ್ಲೇ ಇಂದು (ಆ.10) ಮೈತ್ರಿ ಪಕ್ಷಗಳ ಸಮಾರೋಪ ಸಮಾವೇಶ ನಡೆಯಲಿದೆ.
ಮೈತ್ರಿ ನಾಯಕರಿಂದ ಸಮಾವೇಶಕ್ಕೂ ಮುನ್ನ ಎರಡು ಕಿ.ಮೀ ಪಾದಯಾತ್ರೆ ನಡೆಯಲಿದೆ. ಸಮಾವೇಶದಲ್ಲಿ ಮುಡಾ ಹಗರಣ, ವಾಲ್ಮೀಕಿ ಹಗರಣ ಹಾಗೂ ರಾಜ್ಯ ಸರ್ಕಾರದ ಅಕ್ರಮಗಳಲ್ಲೇ ವೇದಿಕೆಯಲ್ಲಿ ಪ್ರತಿಧ್ವನಿಸಲಿದೆ.

ಎರಡು ಪಕ್ಷಗಳ ಕಾರ್ಯರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ನಿನ್ನೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಯಾವ ರೀತಿ ಗುಡುಗಿದರೊ ಅದೇ ರೀತಿ ಯಡಿಯೂರಪ್ಪ ಹಾಗೂ ಕೇಂದ್ರ ಸಚಿವ ಕುಮಾರಸ್ವಾಮಿ ಸರ್ಕಾರದ ವಿರುದ್ಧ ಘರ್ಜಿಸಲಿದ್ದಾರೆ. ಇದೆಲ್ಲಾ ಒಂದು ರೀತಿ ಸವಾಲ್‌ಗೆ ಪ್ರತಿ ಸವಾಲ್ ಆಗಿದ್ದು, ಮೈತ್ರಿ ನಾಯಕರು ನಾವು ಇಮ್ಮ ಹಗರಣ ಬಿಚ್ಚುಡುತ್ತೇವೆ ಎಂದರೆ ಕಾಂಗ್ರೆಸ್ ನಾಯಕರು ಸಹ ನಿಮ್ಮ ಕಾಲದ ಹಗರಣಗಳನ್ನು ಬಿಚ್ಚಿಟ್ಟು ತನಿಖೆಗೆ ಕೊಡುತ್ತೇವೆ ಎಂದು ಸವಾಲು ಹಾಕಿದ್ದಾರೆ.





