ಮೈಸೂರು: ಸಚಿವ ಎಚ್.ಸಿ.ಮಹದೇವಪ್ಪ ಹೆಸರಿನಲ್ಲಿ ಐನಾತಿ ಮಹಿಳೆಯೋರ್ವಳು ಮಹಿಳೆಯರು ಹಾಗೂ ಯುವಕರಿಗೆ ಲಕ್ಷಾಂತರ ರೂ ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ.
ಮೈಸೂರು ಜಿಲ್ಲೆ ಟಿ.ನರಸೀಪುರ ತಾಲ್ಲೂಕಿನ ಕೊಳತ್ತೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗ್ರಾಮದ ಜ್ಯೋತಿ ಎಂಬ ಮಹಿಳೆಯೋರ್ವಳು ಸಚಿವ ಎಚ್.ಸಿ.ಮಹದೇವಪ್ಪ ಹೆಸರೇಳಿಕೊಂಡು ಲಕ್ಷಾಂತರ ರೂ ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ.
ಮಹಿಳೆಯರು ಹಾಗೂ ಯುವಕರನ್ನೇ ಟಾರ್ಗೆಟ್ ಮಾಡಿರುವ ಆರೋಪಿ ಜ್ಯೋತಿ ಲಕ್ಷಾಂತರ ರೂ ಹಣ ಪೀಕಿದ್ದು, ಸರ್ಕಾರದ ವಿವಿಧ ಯೋಜನೆಗಳ ಸವಲತ್ತು ಹಾಗೂ ಸಾಲ ಕೊಡಿಸುವುದಾಗಿ ಹಣ ಪಡೆದು ಮೋಸ ಮಾಡಿರುವ ಆರೋಪ ಕೇಳಿಬಂದಿದೆ.
ಇದನ್ನು ಓದಿ :ಗೋಲ್ಡ್ ಸ್ಮಗ್ಲಿಂಗ್ ಕೇಸ್: ನಟಿ ರನ್ಯಾ ರಾವ್‌ಗೆ ಬಿಗ್ ಶಾಕ್
ಬರೋಬ್ಬರಿ 27 ಲಕ್ಷ ರೂವರೆಗೆ ಹಣ ವಂಚನೆ ಮಾಡಿರುವ ಆರೋಪ ಕೇಳಿಬಂದಿದ್ದು, ವಂಚನೆಗೊಳಗಾದ ಗ್ರಾಮಸ್ಥರು ತಲಕಾಡು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ನ್ಯಾಯ ಕೊಡಿಸುವಂತೆ ಮಹಿಳೆಯರು ಹಾಗೂ ಯುವಕರು ಪೊಲೀಸರ ಮೊರೆ ಹೋಗಿದ್ದು, ನಮ್ಮ ಹಣ ನಮಗೆ ವಾಪಸ್ ಕೊಡಿ, ಆರೋಪಿ ಜ್ಯೋತಿಗೆ ತಕ್ಕ ಪಾಠ ಕಲಿಸಿ ಎಂದು ಮನವಿ ಮಾಡಿದ್ದಾರೆ.





