ಮೈಸೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ಸಚಿವ ಕೆ. ವೆಂಕಟೇಶ್ ದ್ವೇಷದ ರಾಜಕಾರಣ ಮಾಡುತ್ತಾ ನನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಮೈಮುಲ್ ಅಧ್ಯಕ್ಷ ಪಿ.ಎಂ.ಪ್ರಸನ್ನ ಗಂಭೀರ ಆರೋಪ ಮಾಡಿದ್ದಾರೆ.
ಕೆ.ವೆಂಕಟೇಶ್ ಸಚಿವರಾದಗಿನಿಂದಲೂ ಒಂದಲ್ಲ ಒಂದು ಕಿರುಕುಳ ನೀಡುತ್ತಿದ್ದಾರೆ. ತಮ್ಮ ಮಗನ ರಾಜಕೀಯ ಭವಿಷ್ಯಕ್ಕಾಗಿ ದ್ವೇಷದ ರಾಜಕಾರಣ ಮಾಡುತ್ತ, ಮೈಮುಲ್ ಅಧ್ಯಕ್ಷ ಸ್ಥಾನದಿಂದ ನನ್ನನ್ನ ಇಳಿಸಲು ಸತತ ಪ್ರಯತ್ನ ಮಾಡುತ್ತಿದ್ದಾರೆ. ಜೊತೆಗೆ ಅಧಿಕಾರಿಗಳನ್ನು ಬಳಸಿಕೊಂಡು ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿದರು.
ನನ್ನನ್ನು ಅಧ್ಯಕ್ಷ ಸ್ಥಾನದಿಂದ ಇಳಿಸಲು ಮೈಮುಲ್ನ ಇತರ ಸದಸ್ಯರ ಮೇಲೆ ಒತ್ತಡ ಹೇರುತ್ತಿದ್ದಾರೆ. ವಾಸಸ್ಥಳ ದೃಡೀಕರಣ ಪತ್ರ, 65 ಎನ್‌ಕ್ವೈರಿ, 64 ಎನ್‌ಕ್ವೈರಿ ಹೆಸರಿನ್ನಲ್ಲಿ ಪದೇ ಪದೇ ಕಿರುಕುಳ ನೀಡುತ್ತಿದ್ದಾರೆ. ಅಲ್ಲದೆ ಅಧಿಕಾರಿಗಳನ್ನು ಬೆಳಗಿನ ಜಾವ 5 ಗಂಟೆಗೆನೇ ಹಾಲು ಉತ್ಪಾದಕ ಕೇಂದ್ರಗಳಿಗೆ ಕಳುಹಿಸಿ ತೊಂದರೆ ಕೊಡುವುದಲ್ಲದೆ ಮೈಮುಲ್ ನ ಇತರ ನಿರ್ದೇಶಕರ ಮೇಲೂ ಒತ್ತಡ ಹಾಕುತ್ತಿದ್ದಾರೆ ಎಂದು ಹೇಳಿದರು.





