Mysore
26
haze

Social Media

ಭಾನುವಾರ, 21 ಡಿಸೆಂಬರ್ 2025
Light
Dark

ಸಿದ್ದರಾಮಯ್ಯ ಸರ್ಕಾರ ಬಂದ ಮೇಲೆ ಮುಸ್ಲಿಮರು ಚಿಗುರಿಕೊಂಡಿದ್ದಾರೆ : ಸೂಲಿಬೆಲೆ !

ಮೈಸೂರು: ರಾಜ್ಯದಲ್ಲಿ ಸಿದ್ದರಾಮಯ್ಯನವರ ಸರ್ಕಾರ ಬಂದ ಮೇಲೆ ಮುಸ್ಲಿಮರು ಚಿಗುರಿಕೊಂಡಿದ್ದಾರೆ. ಕರ್ನಾಟಕದಲ್ಲಿ ಬಾಂಬ್ ಸ್ಪೋಟ ಆಗುತ್ತಿದೆ. ಸಿದ್ದರಾಮಯ್ಯನವರು ಮುಸ್ಲಿಮರ ಓಲೈಕೆ, ತುಷ್ಠಿಕರಣದಲ್ಲಿ ತೊಡಗಿದ್ದಾರೆ ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ಆಕ್ರೋಶ ವ್ತಕ್ತಪಡಿಸಿದರು.

ನಗರದ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿರುವ ರಂಗಮಂಟಪದಲ್ಲಿ ನಮೋ ಬಿಗ್ರೇಡ್-ಮೈಸೂರು ವತಿಯಿಂದ ಸೋಮವಾರ ಅಯೋಜಿಸಿದ್ದ ‘ನಮೋಭಾರತ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮೋದಿ ಅಧಿಕಾರಕ್ಕೆ ಬಂದ ನಂತರ ದೇಶದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಯುವಕರು ದೇಶ ಭಕ್ತಿಯನ್ನು ಬೆಳೆಸಿಕೊಳ್ಳುವ ಮೂಲಕ ಸುಭದ್ರ ಭಾರತ ನಿರ್ವಾಣಕ್ಕೆ ಮೋದಿ ಅವರ ಜೊತೆ ಕೈ ಜೋಡಿಸಬೇಕು. ೨೦೨೪ರ ಲೋಕಸಭಾ ಚುನಾವಣೆಯಲ್ಲಿ ಕಳೆದ ಬಾರಿಗಿಂತಲೂ ಹೆಚ್ಚಿನ ಸ್ಥಾನಗಳನ್ನು ಬಿಜೆಪಿ ಪಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನರೇಂದ್ರ ಮೋದಿ ಬರುವುದಕ್ಕೂ ಮುನ್ನ ಹಿಂದೂ ಎಂದು ಅಂತ ಹೇಳುವುದಕ್ಕೂ ಹೆದರುತ್ತಿದ್ದ ಆ ಕಾಲದಲ್ಲಿ ಪ್ರಸ್ತುತ ಇಂದಿನ ದಿನದಲ್ಲಿ ಹಿಂದೂ ಎಂದು ಧೈರ್ಯವಾಗಿ ಹೇಳುವುದಕ್ಕೆ ಮೋದಿ ಅವರೇ ಕಾರಣಕರ್ತರಾಗಿದ್ದಾರೆ. ನಮ್ಮ ದೇಶವನ್ನು ಕಡೆಗಣಿಸುತ್ತಿದ್ದ ಜಗತ್ತಿನ ರಾಷ್ಟ್ರಗಳು ಮೋದಿಯವರ ಸಮರ್ಥ ನಾಯಕತ್ವದ ಪರಿಣಾಮದಿಂದಾಗಿ ಇಂದು ರಾಜ ಮರ್ಯಾದೆಯನ್ನು ನೀಡುವಂತಾಗಿದೆ ಎಂದರು.

ಜಗತ್ತಿನಲ್ಲೇ ಅತ್ಯಂತ ದೊಡ್ಡ ಪರಿವಾರ ಇದ್ದರೆ ಅದು ಮೋದಿ ಪರಿವಾರ.ಮೊದಲ ಸೀಟು ಬಿಜೆಪಿಗೆ ಬಂದಿದೆ. ಸೂರತ್ ನಲ್ಲಿ ಬಿಜೆಪಿ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ೪೦೦ ಕಮಲದಲ್ಲಿ ಮೈಸೂರಿನ ಒಂದು ಕಮಲ ಇರಬೇಕು. ನರೇಂದ್ರ ಮೋದಿ ಭಾರತವನ್ನು ದಕ್ಷೀಣಾರ್ಧ ಗೋಳದ ನಾಯಕನನ್ನಾಗಿ ಮಾಡಿದ್ದಾರೆ. ಸ್ವಾತಂತ್ರ್ಯದ ನಂತರ ಬಂದ ಎಲ್ಲಾ ಸರ್ಕಾರಗಳು ಮಾಡದ ಕೆಲಸಗಳನ್ನು ಕೇವಲ ೧೦ ವರ್ಷಗಳಲ್ಲಿ ಮಾಡಿ ದೇಶವನ್ನು ಜಗತ್ತಿಗೆ ಗುರುತಿಸುವಂತೆ ಮಾಡಿರುವ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ.

ಹೀಗಾಗಿ ಭವ್ಯ ಭಾರತದ ಭವಿಷ್ಯಕ್ಕೆ ಮತ್ತೆ ನರೇಂದ್ರ ಮೋದಿ ಅತ್ಯವಶ್ಯಕವಾಗಿದ್ದಾರೆ. ಮೈಸೂರಿನ ಲೋಕಸಭೆಗೂ ಕಮಲ ಅರಳಬೇಕೆಂದರು.

Tags:
error: Content is protected !!