Mysore
15
overcast clouds

Social Media

ಗುರುವಾರ, 18 ಡಿಸೆಂಬರ್ 2025
Light
Dark

ಹೆಚ್ಚಾದ ತಂತ್ರಜ್ಞಾನ ; ದುಷ್ಪರಿಣಾಮಗಳ ಅರಿವು ಮುಖ್ಯ : ಕೆ.ಎಂ ಗಾಯಿತ್ರಿ

ಮೈಸೂರು: ಮಾಹಿತಿ ತಂತ್ರಜ್ಞಾನ ಮತ್ತು ಎಲೆಕ್ಟ್ರಾನಿಕ್ಸ್ ಮಂತ್ರಾಲಯ ಹಾಗೂ ಜಿಲ್ಲಾ ಮಾಹಿತಿ ಕೇಂದ್ರದ ವತಿಯಿಂದ ಜಿಪಂ ಕಚೇರಿಯ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಇಂದು “ಸುರಕ್ಷಿತ ಇಂಟರ್ ನೆಟ್ ದಿನ” ಆಚರಣೆ ಅಂಗವಾಗಿ ಆಯೋಜಿಸಿದ್ದ ಒಂದು ದಿನದ ಕಾರ್ಯಗಾರವನ್ನು ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಗಾಯಿತ್ರಿ  ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ದೈನಂದಿನ ಜೀವನದಲ್ಲಿ ತಂತ್ರಜ್ಞಾನ ಹೆಚ್ಚಾಗಿ ಆವರಿಸಿದ್ದು, ತಂತ್ರಜ್ಞಾನದ ಪ್ರಯೋಜನ ಹಾಗೂ ದುಷ್ಪರಿಣಾಮಗಳ ಬಗ್ಗೆ ಅರಿವು ಅಗತ್ಯವಾಗಿದ್ದು ಹಾಗೂ ಅಪರಾಧಗಳನ್ನು ತಡೆಗಟ್ಟಲು, ಸಮಾಜದ ಮೇಲೆ ಕೆಟ್ಟ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ಈ ಕಾರ್ಯಾಗಾರ ಅನುಕೂಲವಾಗಿದೆ ಎಂದು ಹೇಳಿದರು.

ತಂತ್ರಜ್ಞಾನ ಬಳಕೆಯಿಂದ ವಿವಿಧ ರೀತಿಯಲ್ಲಿ ಮೋಸ ಮಾಡುವ ಪ್ರವೃತ್ತಿ ಹಾಗೂ ಸಾಮಾಜಿಕ ಜಾಲತಾಣಗಳನ್ನು ದುರ್ಬಳಕೆ ಮಾಡಿಕೊಂಡು ವಂಚಿಸುತ್ತಿರುವುದು ಕಂಡು ಬರುತ್ತಿದೆ. ಇದರಿಂದ ಯಾವುದೇ ಆಮೀಷಗಳಿಗೆ ಒಳಗಾಗದೇ ಅಂತರ್ಜಾಲದ ಉಪಯೋಗಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸಿಕೊಂಡು ವಂಚಿತರಾಗದೇ ಬದುಕು ನಡೆಸಿ ಎಂದು ಅರಿವು ಮೂಡಿಸಿದರು.

ಅಪರ ಜಿಲ್ಲಾಧಿಕಾರಿಗಳಾದ ಡಾ.ಪಿ. ಶಿವರಾಜು ಅವರು ಮಾತನಾಡಿ, ಕಾಲಬದಲಾದಂತೆ ತಂತ್ರಜ್ಞಾನವು ಆಲದ ಮರದಂತೆ ಬೆಳೆದಿದ್ದು, ಮನುಷ್ಯನಿಗಿಂತ ಸಾವಿರಪಟ್ಟು ಬೆಳೆಯುತ್ತಿದೆ. ಇದರಿಂದ ತಂತ್ರಜ್ಞಾನದ ಅರಿವು ಮೊದಲು ಅಗತ್ಯವಾಗಿದ್ದು, ದೈನಂದಿನ ಕೆಲಸ ಕಾರ್ಯಗಳಿಗೆ ಅಗತ್ಯವಿರುವ ತಂತ್ರಜ್ಞಾನದ ಅರಿವು, ಮೋಸ ಹೋಗದಂತೆ ಸೈಬರ್ ಜಾಗೃತಿಗಳನ್ನು ಅಳವಡಿಸಿಕೊಳ್ಳಬೇಕು. ಕಚೇರಿಗಳಲ್ಲಿ ನಿಮ್ಮ ವೈಯಕ್ತಿಕ ಲಾಗಿನ್ ಗಳ ಬಗ್ಗೆ ಅರಿವಿನ ಜೊತೆಗೆ ಇತರರಿಗೆ ಲಾಗಿನ್ ಗಳನ್ನು ಶೇರ್ ಮಾಡದಂತೆ ಎಚ್ಚರಿಕೆ ವಹಿಸಿ ಎಂದು ತಿಳಿಸಿದರು.

ಕುವೆಂಪುನಗರದ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಶಿಲ್ಪ ರವರು ಸಂಪನ್ಮೂಲ ವ್ಯಕ್ತಗಳಾಗಿ ದೈನಂದಿನ ಜೀವನದಲ್ಲಿ ಇಂಟರ್ ನೆಟ್ ಬಳಕೆ, ಇಂಟರ್ ನೆಟ್ ಅಪಾಯಗಳು, ಆನ್ ಲೈನ್ ವಂಚನೆ, ಸೈಕಾಲಾಜಿಕಲ್ ವಂಚನೆ, ಬ್ಯಾಂಕಿಂಗ್ ವಂಚನೆ, ಮೋಸ ಹೋಗದಂತೆ ಮುನ್ನೇಚರಿಕೆ ಕ್ರಮಗಳ ಕುರಿತು ಅರಿವು ಮೂಡಿಸಿದರು.

ಕಾರ್ಯಕ್ರಮದಲ್ಲಿ ಉಪಕಾರ್ಯದರ್ಶಿ(ಆಡಳಿತ) ಸವಿತಾ, ಮುಖ್ಯ ಲೆಕ್ಕಾಧಿಕಾರಿ ಸಿದ್ದಗಂಗಮ್ಮ, ಜಿಲ್ಲಾ ಸೂಚನಾ ವಿಜ್ಞಾನ ಅಧಿಕಾರಿ ಸುದರ್ಶನ್ ರವರು ಸೇರಿದಂತೆ ಇತರರು ಹಾಜರಿದ್ದರು.

Tags:
error: Content is protected !!