ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಂದು ಮತ್ತು ನಾಳೆ ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ್ ಮತ್ತು ಡಾ.ಧನ್ಯತಾ ಮದುವೆ ಕಾರ್ಯ ನಡೆಯಲಿದ್ದು, ವಿವಾಹ ಮಹೋತ್ಸವಕ್ಕೆ ಮೈಸೂರಿನ ವಸ್ತು ಪ್ರದರ್ಶನದ ಆವರಣದಲ್ಲಿ ಸಕಲ ಸಿದ್ಧತೆ ಮಾಡಲಾಗಿದೆ.
ಇಂದು(ಫೆಬ್ರವರಿ.15) ಸಂಜೆಗೆ ಆರತಕ್ಷತೆಗೆ ಕಾರ್ಯಕ್ರಮ ನೆರರವೇರಲಿದ್ದು, ಚಿತ್ರರಂಗದ ಕಲಾವಿದರು, ರಾಜಕೀಯ ಕ್ಷೇತ್ರದ ಗಣ್ಯರು, ನಟ ಡಾಲಿ ಧನಂಜಯ್ ಅಭಿಮಾನಿಗಳು ಸೇರಿದಂತೆ ಸಹಸ್ರಾರು ಸಂಖ್ಯೆಯಲ್ಲಿ ಮದುವೆಗೆ ಆಗಮಿಸುವ ಸಾಧ್ಯತೆ ಇದೆ. ಇನ್ನು ಸಹನಟ ಅರುಣ್ ಸಾಗರ್ ನೇತೃತ್ವದಲ್ಲಿ ಕಳೆದ ಎರಡು-ಮೂರು ದಿನಗಳಿಂದ ಸಿದ್ಧತಾ ಕೆಲಸ ಅದ್ದೂರಿಯಾಗಿ ನಡೆಯುತ್ತಿದೆ.
ನಟ ಧನಂಜಯ್ ಮತ್ತು ಡಾಕ್ಟರ್ ಧನ್ಯತಾ ಅವರು ಕಲ್ಯಾಣ ಮಂಟಪ ದೇವಾಲಯದ ರೂಪದಲ್ಲಿ ನಿರ್ಮಾಣವಾದೆ. ಸಂಜೆ ನಡೆಯುವ ಆರತಕ್ಷತೆಗೆ ರೋಮನ್ ಶೈಲಿಯ ಮಾದರಿ ಮಂಟಪ ಸಿದ್ದಪಡಿಸಲಾಗುತ್ತಿದೆ.