Mysore
16
few clouds

Social Media

ಸೋಮವಾರ, 08 ಡಿಸೆಂಬರ್ 2025
Light
Dark

ಅಪಘಾತ : ಕೂಲಿಯಾಳು ಸಾವು, 6ಮಂದಿ ಕಾರ್ಮಿಕರು ಗಂಭೀರ

accident (1)

ಎಚ್‌.ಡಿ.ಕೋಟೆ : ಶುಂಠಿ ಕೆಲಸ ಮುಗಿಸಿ ವಾಪಸ್ಸಾಗುತ್ತಿದ್ದಾಗ ಗೂಡ್ಸ್ ಆಪೆ ಆಟೋ ಮತ್ತು ಟೆಂಪೋ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ 6 ಮಂದಿ ಕಾರ್ಮಿಕರು ಗಾಯಗೊಂಡು ಗೂಡ್ಸ್ ಚಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಗುರುವಾರ ಸಂಜೆ ನಡೆದಿದೆ.

ತಾಲ್ಲೋಕಿನ ಮೇಟಿಕುಪ್ಪೆ ಗ್ರಾಮದ ಗೂಡ್ಸ್ ಚಾಲಕ ಗುರುಸ್ವಾಮಿ ಮೃತ ದುರ್ದೈವಿ. ಗುರುಸ್ವಾಮಿ ಮೇಟಿಕುಪ್ಪೆ ಪ್ರಾಥಮಿಕ ಸಹಕಾರ ಸಂಘದ ಅಧ್ಯಕ್ಷರಾಗಿದ್ದರು. ಮಂಡ್ಯ ಜಿಲ್ಲೆಯ ಮದ್ದೂರು ತಾಲೋಕಿನ ನಾಗಮ್ಮ, ಕಿರಣ, ಶಿಲ್ವ ಮತ್ತು ಕೆ.ಆರ್.ಎಸ್ ಸಮೀಪದ‌ ಬಸವನಪುರ ಗ್ರಾಮದ ಲಕ್ಷ್ಮಿ, ಅನು ಮತ್ತೊಬ್ಬ ಸೇರಿ 6 ಮಂದಿ ಗಾಯಗೊಂಡಿದ್ದು ವಯೋವೃದ್ದ ನಾಗಮ್ಮ ಅವರ ತಲೆಗೆ ತೀವ್ರ ಪೆಟ್ಟು ಬಿದ್ದು ಅವರ ಸ್ಥಿತಿ ಗಂಭೀರವಾಗಿದೆ. ಶಿಲ್ವ ಅವರ ಹಸುಗೂಸೊಂದು ಆಶ್ವರ್ಯಕರ ರೀತಿಯಲ್ಲಿ ಯಾವುದೇ ಗಾಯವಾಗದೆ ಅನಾಹುತದಿಂದ ಪರಾಗಿದೆ. ಘಟನ ಸ್ಥಳದಿಂದ ಪುಟಾಣಿ ಮಗುವನ್ನು ರಕ್ಷಿಸಿದ ಇನ್ಸ್ ಪೆಕ್ಟರ್ ಗಂಗಾಧರ ಪೊಲೀಸ್ ವಾಹನದಲ್ಲಿ ಮಗುವನ್ನು ತರಾತುರಿಯಲ್ಲಿ ಆಸ್ಪತ್ರೆಗೆ ಸ್ಥಳಾಂತರಿಸಿ ಮಾನವೀಯತೆ ಮೆರೆದಿದ್ದಾರೆ.

ಘಟನೆ ವಿವರ ;
ಮಂಡ್ಯ ಜಿಲ್ಲೆಯ ಈ ಕೂಲಿ ಕಾರ್ಮಿಕರು ಶುಂಠಿ ಬಿಡಿಸುವ ಕಾಯಕದಲ್ಲಿ ತೊಡಗಿದ್ದು, ಕಳೆದ ಒಂದು ತಿಂಗಳಿಂದ ಮೇಸ್ತ್ರಿ ಹೇಳಿದ ಕಡೆಗಳಿಗೆ ತೆರಳಿ ಶುಂಠಿ ಬಿಡಿಸುವ ಕೆಲ ಮಾಡುತ್ತಿದ್ದರು. ಅಣ್ಣೂರ ಬಳಿ ಶುಂಠಿ ಬಿಡಿಸಿ ಸಂಜೆ ಆಗುತ್ತಿದ್ದಂತೆಯೇ ಮೇಸ್ತ್ರಿ ಆದೇಶದಂತೆ ತಾಲೋಕಿನ ಬೇರೆ ಗ್ರಾಮದ ಕಡೆ ಸ್ಥಳಾಂತರಗೊಳ್ಳಲು 6 ಮಂದಿ ಮತ್ತು ಹಸುಗೂಸೊಂದು ಗೂಡ್ಸ್ ವಾಹನದಲ್ಲಿ ಎಚ್.ಡಿ.ಕೋಟೆ ಕಡೆಗೆ ಪ್ರಯಾಣ ಬೆಳೆಸಿದ್ದರು.

ಟೈಗರ್ ಬ್ಲಾಕ್ ಸಮೀಪದಲ್ಲಿ ವಿರುದ್ದ ದಿಕ್ಕಿನಿಂದ ಬಂದ ಟೆಂಪೋ ಗೂಡ್ಸ್ ವಾಹನಕ್ಕೆ ರಭಸವಾಗಿ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಗೂಡ್ಸ್ ವಾಹನ ಪಲ್ಟಿಯಾಗಿ ವಾಹನದಲ್ಲಿದ್ದವರು ಚಲ್ಲಾಪಿಲ್ಲಿಯಾಗಿ ರಸ್ತೆಗೆ ಬಿದ್ದಿದ್ದಾರೆ. ಮಗು ಹೊರತು ಪಡಿಸಿ ಇನ್ನುಳಿದ ಆರು ಮಂದಿಗೂ ಗಾಯಗಳಾಗಿದ್ದು, ಅವರನ್ನು ಎಚ್.ಡಿ.ಕೋಟೆ ಸಾರ್ವಜನಿಕ ಆಸ್ಪತ್ರೆಗೆ ಸ್ಥಳಾಂತರಿಸಿ ಚಿಕಿತ್ಸೆ ನೀಡಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ನಾಗಮ್ಮ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಎಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಂಡಿದ್ದಾರೆ.

Tags:
error: Content is protected !!