Mysore
24
haze

Social Media

ಶನಿವಾರ, 20 ಡಿಸೆಂಬರ್ 2025
Light
Dark

ಸಂಚಾರಿ ಪೊಲೀಸರಿಗೆ ಟೆನ್ಸನ್: ಮೈಸೂರು ಖಾಸಗಿ ಆಂಬ್ಯುಲೆನ್ಸ್ ಗಳಿಂದ ಪರಿಸ್ಥಿತಿ ದುರ್ಬಳಕೆ

ಮೈಸೂರು : ಸರಕಾರದ 108 ಆಂಬ್ಯುಲೆನ್ಸ್ ಗಳನ್ನು ನಿರ್ವಹಿಸುವುದು ಕಷ್ಟವಲ್ಲ. ಏಕೆಂದರೆ ಅವುಗಳ ಬಗ್ಗೆ ಮೊದಲೇ ಮಾಹಿತಿ ಸಿಗುವುದರಿಂದ ಸುಲಭವಾಗಿ ದಾರಿ ಮಾಡಿಕೊಡಬಹುದು. ಆದರೆ ಖಾಸಗಿ ಆಂಬ್ಯುಲೆನ್ಸ್ ಗಳಲ್ಲಿ ರೋಗಿ ಇದ್ದರೂ, ಇರದಿದ್ದರೂ ದಾರಿ ಮಾಡಿಕೊಡಬೇಕಾಗಿರುವುದರಿಂದ ಗಂಭೀರ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ, ಮೈಸೂರು ಸಂಚಾರಿ ಪೊಲೀಸರು. ಇವರಿಗೆ ಒಂದೆಡೆ ದಿನನಿತ್ಯದ ವಾಹನ ದಟ್ಟಣೆಯನ್ನು ನಿರ್ವಹಣೆ ಮಾಡುವುದು ಒಂದು ಸಮಸ್ಯೆಯಾದರೆ, ಇನ್ನೊಂದೆಡೆ ದಿನವೂ ಆಂಬ್ಯುಲೆನ್ಸ್ ಗಳ ನಿರ್ವಹಣೆ ಮಾಡುವುದೂ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಪ್ರತಿನಿತ್ಯ ಯಾವುದೇ ಮುನ್ಸೂಚನೆ ಇಲ್ಲದೆ ಕೇವಲ ಸೈರನ್ ಶಬ್ದ ಕೇಳಿಯೇ ಕನಿಷ್ಠ ಒಂದು ಸಾವಿರ ಆಂಬ್ಯುಲೆನ್ಸ್ ಗಳಿಗೆ ದಾರಿ ಮಾಡಿಕೊಡುತ್ತಿದ್ದು, ಅವರು ಹೈರಾಣಾಗುತ್ತಿದ್ದಾರೆ.
ಸರಕಾರದ 108 ಆಂಬ್ಯುಲೆನ್ಸ್ ಗಳನ್ನು ನಿರ್ವಹಿಸುವುದು ಕಷ್ಟವಲ್ಲ. ಏಕೆಂದರೆ ಅವುಗಳ ಬಗ್ಗೆ ಮೊದಲೇ ಮಾಹಿತಿ ಸಿಗುವುದರಿಂದ ಸುಲಭವಾಗಿ ದಾರಿ ಮಾಡಿಕೊಡಬಹುದು. ಆದರೆ ಖಾಸಗಿ ಆಂಬ್ಯುಲೆನ್ಸ್ ಗಳಲ್ಲಿ ರೋಗಿ ಇದ್ದರೂ, ಇರದಿದ್ದರೂ ದಾರಿ ಮಾಡಿಕೊಡಬೇಕಾಗಿರುವುದರಿಂದ ಗಂಭೀರ ಸಮಸ್ಯೆ ಎದುರಿಸುವಂತಾಗಿದೆ ಎನ್ನುತ್ತಾರೆ.
ಹೆಚ್ಚುತ್ತಿರುವ ದುರ್ಬಳಕೆ: ಇತ್ತೀಚಿನ ದಿನಗಳಲ್ಲಿ ಆಂಬ್ಯುಲೆನ್ಸ್ ಗಳ ದುರ್ಬಳಕೆ ಹೆಚ್ಚುತ್ತಿದೆ. ಎಷ್ಟೋ ಸಂದರ್ಭಗಳಲ್ಲಿ ವಾಹನ ದಟ್ಟಣೆ ತಪ್ಪಿಸಿಕೊಳ್ಳುವ ಸಲುವಾಗಿಯೇ ಆಂಬ್ಯುಲೆನ್ಸ್ ಗಳು ಸೈರನ್ ಹಾಕಿಕೊಂಡು ಸಂಚರಿಸುತ್ತವೆ. ಹಲವು ಸಂದರ್ಭಗಳಲ್ಲಿ ಆಂಬ್ಯುಲೆನ್ಸ್ ತುರ್ತಾಗಿ ಆಸ್ಪತ್ರೆಗೆ ಧಾವಿಸದಿದ್ದರೂ ಪರವಾಗಿಲ್ಲ. ಉದಾಹರಣೆಗೆ ಕೈ ಮುರಿದವರು, ಗಂಭೀರ ಕಾಯಿಲೆಗಳಿಲ್ಲದವರು, ಮೃತ ದೇಹಗಳ ರವಾನೆ ವೇಳೆ ಆಂಬ್ಯುಲೆನ್ಸ್ ಗಳಿಗೆ ಝೀರೋ ಟ್ರಾಫಿಕ್ ಬೇಕಿರುವುದಿಲ್ಲ. ಆದರೂ ಅಂತಹ ವಾಹನಗಳೂ ಸೈರನ್ ಹಾಕಿಕೊಂಡು ಬಂದಾಗ ಸಂಚಾರ ಪೊಲೀಸರಿಗೆ ಅವುಗಳ ಸುಗಮ ಸಂಚಾರಕ್ಕೆ ದಾರಿ ಮಾಡಿಕೊಡದೇ ಅನ್ಯ ದಾರಿಯಲ್ಲ. ಏಕೆಂದರೆ ಅಂಬ್ಯುಲೆನ್ಸ್ಲಿ ರೋಗಿ ಇದ್ದಾರೆಯೇ, ಇಲ್ಲವೇ? ಅವರಿಗೆ ನಿಜವಾಗಿಯೂ ಕಾಯಿಲೆ ಇದೆಯೇ, ಏನು ಎತ್ತ ಎಂಬುದನ್ನು ಪರಿಶೀಲಿಸುವಷ್ಟು ಸಮಯವಿರುವುದಿಲ್ಲ.ಹಾಗಾಗಿ ಹಲವು ಖಾಸಗಿ ಆಂಬ್ಯುಲೆನ್ಸ್ ಇದನ್ನೇ ಬಳಸಿಕೊಂಡು ದುರ್ಬಳಕೆ ಮಾಡಿಕೊಳ್ಳುತ್ತವೆ ಎನ್ನುತ್ತಾರೆ.

ಗ್ರೀನ್ ಕಾರ್ಡ್ ಸಮಸ್ಯೆಯಲ್ಲ:ಅಂಗಾಂಗ ದಾನ ಮತ್ತಿತರ ಸಂದರ್ಭದಲ್ಲಿ ಗ್ರೀನ್ ಕಾರಿಡಾರ್ ಒದಗಿಸುವುದು ಸಮಸ್ಯೆಯಾಗದು. ಏಕೆಂದರೆ ಮುಂಚಿತವಾಗಿಯೇ ಕಾರಿಡಾರ್ ಮಾರ್ಗ ಸಿದ್ಧವಾಗಿರುತ್ತದೆ. ಆ ವಾಹನ ಹೊರಟ ನಂತರ ಅದು ನಿರ್ದಿಷ್ಟ ಗುರಿ ತಲುಪುವವರೆಗೆ ಎಲ್ಲ ಜಂಕ್ಷನ್ ಗಳಲ್ಲಿ ವಾಹನಗಳನ್ನು ತಡೆದು ನಿಲ್ಲಿಸಿ ಸಮಯಕ್ಕೆ ಸರಿಯಾಗಿ ತಲುಪಲು ವ್ಯವಸ್ಥೆ ಕಲ್ಪಿಸಲಾಗುವುದು” ಎನ್ನುತ್ತಾರೆ ಸಂಚಾರಿ ಪೊಲೀಸರು.
ಕೋಟ್
ಸಂಚಾರ ಪೊಲೀಸರು ಕೇವಲ ಸೈರನ್ ಶಬ್ದ ಕೇಳಿಯೇ ದಿನವೊಂದಕ್ಕೆ ಸಾವಿರಕ್ಕೂ ಅಧಿಕ ಆಂಬ್ಯುಲೆನ್ಸ್ ಗಳಿಗೆ ದಾರಿ ಮಾಡಿಕೊಡುತ್ತಿದ್ದಾರೆ. ಆದರೆ, ಖಾಸಗಿ ಆಂಬ್ಯುಲೆನ್ಸ್ ಗಳಿಂದ ಆಗಾಗ್ಗೆ ಸಮಸ್ಯೆ ಎದುರಾಗುತ್ತಿದ್ದು, ಅವರಿಗೆ ಸರಕಾರಿ ಅಂಬ್ಯುಲೆನ್ಸ್ ಸೇವೆ 108ರ ಜತೆ ಇಂಟಿಗ್ರೇಟ್ ಮಾಡಿಕೊಂಡು ಒಂದು ಚೆಕ್ಲಿಸ್ಟ್ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.
ಹೆಸರೇಳಲಿಚ್ಚಿಸದ ಸಂಚಾರಿ ಪೊಲೀಸ್.ಮೈಸೂರು ನಗರ

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!