Mysore
27
scattered clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ಮೈಸೂರು ದಸರಾ 2024: ಅರಮೆನೆಗೆ ಎಂಟ್ರಿಕೊಟ್ಟ ಅಭಿಮನ್ಯು ಅಂಡ್‌ ಟೀಂ!

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಕಾಡಿನಿಂದ ಮೈಸೂರಿಗೆ ಆಗಮಿಸಿರುವ ಗಜಪಡೆಯನ್ನು ಶುಕ್ರವಾರ (ಆ.23) ಸಾಂಪ್ರದಾಯಿಕವಾಗಿ ಅರಮನೆಗೆ ಸ್ವಾಗತಿಸಲಾಯಿತು.

ಆಗಸ್ಟ್‌ 21 ರಂದು ನಾಗರಹೊಳೆ ವನ್ಯಧಾಮದ ಹೆಬ್ಬಾಗಿಲು ವೀರನಹೊಸಹಳ್ಳಿಯಿಂದ ಗಜಪಡೆಗೆ ಪೂಜೆ ಸಲ್ಲಿಸಿ ಮೈಸೂರಿಗೆ ಕರೆ ತರುವ ಮೂಲಕ ನಾಡಹಬ್ಬ ದಸರಾಗೆ ವಿದ್ಯುಕ್ತ ಚಾಲನೆ ನೀಡಲಾಗಿತ್ತು. ವೀರನಹೊಸಹಳ್ಳಿಯಿಂದ ಮೈಸೂರಿಗೆ ಆಗಮಿಸಿದ ಗಜಪಡೆ ನಗರದ ಅಶೋಕಪುರಂ ನಲ್ಲಿರುವ ಅರಣ್ಯ ಭವನದಲ್ಲಿ ವಿಶ್ರಾಂತಿ ಪಡೆದಿತ್ತು.

ಅರಣ್ಯಭವನದಿಂದ ಅರಮನೆ ಕಡೆಗೆ ಇಂದು ಪಯಣ ಬೆಳಿಸಿದ ಗಜಪಡೆಗೆ ಅರಮನೆಯಲ್ಲಿಂದು ಬೆಳಿಗ್ಗೆ 10.10 ರಿಂದ 10.30 ಗಂಟೆ ವರೆಗಿನ ಶುಭ ಗಳಿಗೆಯಲ್ಲಿ ಸಾಂಪ್ರದಾಯಿಕವಾಗಿ ಭವ್ಯ ಸ್ವಾಗತ ನೀಡಿ ಬರಮಾಡಿಕೊಳ್ಳಲಾಯಿತು.

ಅಭಿಮನ್ಯು ನೇತೃತ್ವದ 9 ಆನೆಗಳು ಇಂದು ಅರಮನೆ ಪ್ರವೇಶಿಸಿದವು. ಅರಮನೆ ಆವರಣದಲ್ಲಿ ಗಜಪಡೆ, ಕಾವಾಡಿಗರು ಮತ್ತು ಮಾವುತರಿಗೆ ಉಳಿಯಲು ಎಲ್ಲಾ ವ್ಯವಸ್ಥೆ ಮಾಡಲಾಗಿದ್ದು, ಇಂದು ಅರಮನೆಯಲ್ಲಿ ಬೀಡು ಬಿಡಲಿರುವ ಅಭಿಮನ್ಯು ತಂಡ ಕೆಲವು ದಿನಗಳ ಬಳಿಕ ಜಂಬೂ ಸವಾರಿಯಲ್ಲಿ ಹಜ್ಜೆ ಹಾಕಲು ತಯಾರಿ ಆರಂಭಿಸಲಿವೆ.

Tags: