Mysore
25
few clouds

Social Media

ಸೋಮವಾರ, 23 ಮಾರ್ಚ್ 2026
Light
Dark

ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಯುವಕ : ಐವರ ಬಾಳಿಗೆ ಬೆಳಕು

ಮೈಸೂರು : ಮೆದುಳು ನಿಷ್ಕ್ರಿಯಗೊಂಡಿದ್ದ ಗುಂಡ್ಲುಪೇಟೆಯ ಎಚ್.ಆರ್.ರಾಕೇಶ್ ಎಂಬ ಯುವಕನ ಅಂಗಾಂಗಗಳನ್ನು ಕುಟುಂಬಸ್ಥರು ದಾನ ಮಾಡಿದ್ದು, ಈ ಮೂಲಕ ರಾಕೇಶ್ ಐದು ಜೀವಗಳಿಗೆ ನೆರವಾಗಿದ್ದಾರೆ.

ತಲೆತಿರುಗುವಿಕೆಯಿಂದ ಮೈಸೂರಿನ ಅಪೋಲೊ ಆಸ್ಪತ್ರೆಗೆ ದಾಖಲಾಗಿದ್ದ, ರಾಕೇಶ್ ಜುಲೈ 29ರಂದು ಮೆದುಳಿನ ಅಂಗಾಂಶ ವೈಫಲ್ಯಕ್ಕೆ ತುತ್ತಾಗಿದ್ದರು. ಬಳಿಕ ವೈದ್ಯರು ಪರಿಶೀಲಿಸಿ, ಮೆದುಳು ನಿಷ್ಕ್ರಿಯಗೊಂಡಿರುವುದನ್ನು ಘೋಷಿಸಿದ್ದರು. ಬಳಿಕ ಕುಟುಂಬದವರ ಒಪ್ಪಿಗೆ ಮೇರೆಗೆ, 2 ಕಿಡ್ನಿಗಳು, 1 ಲಿವರ್, ಹೃದಯದ ಕವಾಟಗಳು ಮತ್ತು ಕಾರ್ನಿಯಾಗಳನ್ನು ಪಡೆಯಲಾಯಿತು.

1 ಕಿಡ್ನಿ ಮತ್ತು ಲಿವರ್ ಅನ್ನು ಆಸ್ಪತ್ರೆಯ ರೋಗಿಗಳಿಗೆ ಕಸಿ ಮಾಡಲಾಯಿತು. 1 ಕಿಡ್ನಿಯನ್ನು ಜೆಎಸ್‌ಎಸ್ ಆಸ್ಪತ್ರೆಗೆ, ಕಾರ್ನಿಯಾಗಳನ್ನು ಕೆ.ಆರ್.ಆಸ್ಪತ್ರೆಗೆ ಹಾಗೂ ಹೃದಯದ ಕವಾಟಗಳನ್ನು ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ರವಾನಿಸಲಾಯಿತು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!