Mysore
29
few clouds

Social Media

ಸೋಮವಾರ, 20 ಜನವರಿ 2025
Light
Dark

ಹುಣಸೂರು ನಗರಸಭೆಗೆ ಹೊಸದಾಗಿ ಖರೀದಿಸಿದ ಸಕ್ಕಿಂಗ್‌ ಮತ್ತು ಜಟ್ಟಿಂಗ್‌ ವಾಹನಕ್ಕೆ ಹಸಿರು ನಿಶಾನೆ

ಹುಣಸೂರು: ಒಳಚರಂಡಿ ನಿರ್ವಹಣೆಗೆ 45 ಲಕ್ಷ ಅನುದಾನದಲ್ಲಿ 6 ಸಾವಿರ ಲೀಟರ್‌ ಸಾಮರ್ಥ್ಯ ಹೊಂದಿರುವ ಸಕ್ಕಿಂಗ್‌ ಮತ್ತು ಜಟ್ಟಿಂಗ್‌ ವಾಹನ ಖರೀದಿಸುವ ಮೂಲಕ ನಗರಸಭೆಯೂ ಶುಚಿತ್ವಕ್ಕೆ ಕ್ರಮವಹಿಸಿದೆ ಎಂದು ಶಾಸಕ ಜಿ.ಡಿ.ಹರೀಶ್‌ ಗೌಡ ಹೇಳಿದರು.

ಹುಣಸೂರಿನ ಶಾಸಕರ ಕಚೇರಿ ಆವರಣದಲ್ಲಿ ಹೊಸದಾಗಿ ಖರೀದಿಸಿದ ಸಕ್ಕಿಂಗ್‌ ಮತ್ತು ಜಟ್ಟಿಂಗ್‌ ವಾಹನಕ್ಕೆ ಶಾಸಕ ಜಿ.ಡಿ.ಹರೀಶ್‌ ಗೌಡ ಮತ್ತು ಆಯುಕ್ತ ಮಾನಸ ಅವರು ಇಂದು ಹಸಿರು ನಿಶಾನೆ ತೋರಿದರು.

ಈ ವೇಳೆ ಮಾತನಾಡಿದ ಶಾಸಕ ಜಿ.ಡಿ.ಹರೀಶ್‌ ಗೌಡ ಅವರು, ನಗರಸಭೆಗೆ ನಾನ್‌ ಮಿಲಿಯನ್‌ ಪ್ಲಸ್‌ ಸಿಟಿ ಯೋಜನೆ ಅಡಿಯಲ್ಲಿ 90 ಲಕ್ಷ ಅನುದಾನ ಮಂಜೂರಾಗಿದ್ದು, ಆ ಅನುದಾನದಲ್ಲಿ ಹೆಚ್ಚುವರಿಯಾಗಿ 6 ಸಾವಿರ ಲೀಟರ್‌ ಸಾಮರ್ಥ್ಯದ ವಾಹನ ಖರೀದಿಸಿದೆ. ಉಳಿದ ಅನುದಾನವನ್ನು ನಗರಸಭೆ ವ್ಯಾಪ್ತಿಯಲ್ಲಿ ಹೊಸ ಬಡಾವಣೆಗೆ ಮತ್ತು ನೀರು ಪೈಪ್‌ ಲೈನಿಂಗ್‌ ಮತ್ತು ಪಂಪ್‌ಹೌಸ್‌ ನಿರ್ವಹಣೆಗೆ ಬಳಸಿಕೊಳ್ಳಲಾಗಿದೆ ಎಂದರು.

ಈ ವಾಹನದಿಂದ ನಗರ ವ್ಯಾಪ್ತಿಯಲ್ಲಿ ಒಳಚರಂಡಿ ಶುಚಿಗೊಳಿಸಿ ನೀರು ಸಮರ್ಪಕವಾಗಿ ಹರಿಯಲು ಸಹಕಾರಿಯಾಗಲಿದೆ. ನಗರಸಭೆ ವ್ಯಾಪ್ತಿಯು 4 ರಿಂದ 5 ಕಿ.ಮೀ ಹರಡಿಕೊಂಡಿದ್ದು, 80 ಹೊಸ ಬಡಾವಣೆಗಳಾಗಿವೆ. ಹಾಗಾಗಿ ಸಾರ್ವಜನಿಕರ ಸಮಸ್ಯೆಗೆ ಈ ಹೆಚ್ಚುವರಿ ವಾಹನ ಸಹಕಾರಿ ಆಗಲಿದೆ ಎಂದರು.

ಕಾರ್ಯಕ್ರಮದಲ್ಲಿ ನಗರಸಭೆ ಆಯುಕ್ತೆ ಮಾನಸ, ಸದಸ್ಯರಾದ ಕೃಷ್ಣರಾಜಗುಪ್ತ, ಶರವಣ, ಸತೀಶ್‌ ಕುಮಾರ್‌, ರಮೇಶ್‌, ದೇವರಾಜ್‌, ಯುನಿಸ್‌, ಗೀತಾ, ರಾಣಿ ಪೆರುಮಾಳ್‌, ರಾಧಾ, ಶ್ರೀನಾಥ್‌, ತಹಶೀಲ್ದಾರ್‌ ಮಂಜುನಾಥ್, ಇಓ ಮನು, ಎಇಇ ಶರ್ಮಿಳಾ, ರೂಪಾ, ಸತೀಶ್‌ ಕುಮಾರ್‌ ಹಾಜರಿದ್ದರು.

 

Tags: